Mysore
23
overcast clouds

Social Media

ಬುಧವಾರ, 22 ಏಪ್ರಿಲ 2026
Light
Dark

ಗಡಿಪಾರು ಹೊಸದಲ್ಲ, ಅಕ್ರಮ ವಲಸೆ ತಡೆಯಬೇಕಿದೆ: ಎಸ್‌.ಜೈಶಂಕರ್‌

ನವದೆಹಲಿ: ಗಡಿಪಾರು ಮಾಡುವುದು ಹೊಸದೇನು ಅಲ್ಲ, ಅಕ್ರಮ ವಲಸೆ ತಡೆಯುವ ಅಗತ್ಯವಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿಳಿಸಿದರು.

ರಾಜ್ಯಸಭೆಯಲ್ಲಿ ಇಂದು(ಫೆಬ್ರವರಿ.6) ಈ ಕುಇತು ಭಾಷಣ ಮಾಡಿದ ಅವರು, ಬುಧವಾರದಂದು(ಫೆ.5) ಅಮೆರಿಕಾದಿಂದ ಗಡಿಪಾರು ಮಾಡಲಾದ ೧೦೪ ಭಾರತೀಯರು ನಮ್ಮ ದೇಶಕ್ಕೆ ಹಿಂತಿರುವಾಗ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ಅಮೆರಿಕಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.

ಇನ್ನೂ ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದೇನು ಅಲ್ಲ. ಪ್ರತಿಯೊಂದು ದೇಶದಲ್ಲೂ ಅಕ್ರಮ ವಲಸೆ ತಡೆಯಬೇಕಿದೆ. ತಮ್ಮ ಪ್ರಜೆಗಳು ಎಲ್ಲಾ ದೇಶಗಳಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ, ಅಂತಹವನ್ನು ವಾಪಾಸ್‌ ಕರೆಸಿಕೊಳ್ಳಬೇಕು. ಅಲ್ಲದೇ ನಮ್ಮ ದೇಶಕ್ಕೆ ಅಕ್ರಮವಾಗಿ ವಲಸೆ ಬರುತ್ತಿರುವವರನ್ನು ಸಹ ತಡೆಯಬೇಕಿದೆ. ಜೊತೆಗೆ ಪ್ರತಿಯೊಂದು ದೇಶಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಕಂಡುಬಂದರೆ ತಮ್ಮ ಪ್ರಜೆಗಳನ್ನು ವಾಪಾಸ್‌ ಕರೆಸಿಕೊಳ್ಳುವುದು ಎಲ್ಲಾ ದೇಶಗಳ ಬಾಧ್ಯತೆಯಾಗಿದೆ ಎಂದು ಹೇಳಿದರು.

Tags:
error: Content is protected !!