Mysore
22
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ರೋಹಿತ್‌, ವಿರಾಟ್‌, ಗಿಲ್‌ ದಾಖಲೆ ಸರಿಗಟ್ಟಿದ ಅಭಿಷೇಕ್‌

ಮುಂಬೈ: ಇಂಗ್ಲೆಂಡ್‌ ವಿರುದ್ಧ ನಡೆದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಭರ್ಜರಿ ಶತಕ ಗಳಿಸುವ ಮೂಲಕ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾದ ಪರ ಅಭಿಷೇಕ್‌ ಶರ್ಮಾ 54 ಎಸೆತಗಳಲ್ಲಿ 135 (13 ಸಿಕ್ಸರ್‌, 7 ಬೌಡರಿ) ರನ್‌ಗಳ ಭರ್ಜರಿ ಶತಕ ಸಿಡಿಸಿದ್ದಾರೆ.
ಆ ಮೂಲಕ ವೇಗದ ಶತಕ ಹಾಗೂ ಅರ್ಧಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಅಲ್ಲದೇ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನೆಂಬ ಖ್ಯಾತಿಗೂ ಅಭಿಷೇಕ್‌ ಶರ್ಮಾ ಪಾತ್ರರಾಗಿದ್ದಾರೆ.

ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಭಾರತೀಯರು

*ಅಭಿಷೇಕ್‌ ಶರ್ಮಾ – 135 ರನ್‌ (54 ಎಸೆತ)
*ಶುಭಮನ್‌ ಗಿಲ್‌ – 126 ರನ್‌ (63 ಎಸೆತ)
* ರುತುರಾಜ್‌ ಗಾಯಕ್ವಾಡ್‌ – 123 ರನ್‌ (57 ಎಸೆತ)
* ವಿರಾಟ್‌ ಕೊಹ್ಲಿ – 122 ರನ್‌ (61 ಎಸೆತ)
* ರೋಹಿತ್‌ ಶರ್ಮಾ – 121 ರನ್‌ (69 ಎಸೆತ)

 

Tags:
error: Content is protected !!