Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ವಿಜೃಂಭಣೆಯಿಂದ ಜರುಗಿದ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ

ಮೈಸೂರು: ಸಾವಿರಾರು ಮಂದಿ ಜಯಘೋಷಗಳೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಇಂದು ಬೆಳಿಗ್ಗೆ ಅದ್ಧೂರಿಯಾಗಿ ನೆರವೇರಿತು.

ಸುತ್ತೂರಿನ ಕತೃಗದ್ದುಗೆಯ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಸಾರ್ವಜನಿಕರು ಹೆಬ್ಬಾವಿನ ಗಾತ್ರದ ರಥದ ಹಗ್ಗವನ್ನು ಎಳದು ಹರಕೆ ತೀರಿಸಿದರು. ಬಳಿಕ ರಥಕ್ಕೆ ಹಣ್ಣು-ಜವನ ಎಸೆದು ರಥಕ್ಕೆ ನಮಿಸಿದರು.

ತಮಟೆ, ನಗಾರಿ ವಾದ್ಯಗಳ ನಾದ ಮುಗಿಲುಮುಟ್ಟಿತು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು.

ರಥೋತ್ಸವದದ ಮೆರವಣಿಗೆಯಲ್ಲಿ ಸಾಗಿದ ಹಲವು ಕಲಾತಂಡಗಳು ಮೈಸೂರು ದಸರೆಯನ್ನು ನೆನಪಿಸಿದವು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ದರು.

Tags:
error: Content is protected !!