Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಖೋ-ಖೋ ವಿಶ್ವಕಪ್‌ ಗೆದ್ದವರಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನ

ಬೆಂಗಳೂರು: 2025ರ ಖೋ-ಖೋ ವಿಶ್ವಕಪ್‌ನಲ್ಲಿ ಭಾರತ ತಂಡದ ಮಹಿಳೆಯರು ಹಾಗೂ ಪುರುಷರು ಪ್ರಶಸ್ತಿ ಗೆದ್ದಿರುವುದಕ್ಕೆ ರಾಜ್ಯ ಸರ್ಕಾರ ಅಭಿನಂದನೆ ಸಲ್ಲಿಸಿದೆ.

ಎರಡು ವಿಭಾಗದಲ್ಲೂ ಭಾರತ ವಿಶ್ವ ಚಾಂಪಿಯನ್‌ ಆಗಲು ಕಾರಣರಾದ ಮಂಡ್ಯ ಜಿಲ್ಲೆಯ ಡಿ. ಮಲ್ಲಿಗೆರೆ ಗ್ರಾಮದ ಎಂ.ಕೆ. ಗೌತಮ್‌ ಹಾಗೈ ಮೈಸೂರಿನ ತಿ.ನರಸೀಪುರದ ಕುರುಬೂರಿನ ಚೈತ್ರಾ ಅವರನ್ನು ಸರ್ಕಾರ ಗೌರವಿಸಿ ಸನ್ಮಾನಿಸಿದೆ.

ಇಂದು (ಜ.24) ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ವಿಧಾನಸೌದದ ತಮ್ಮ ಕಚೇರಿಯಲ್ಲಿ ಕ್ರೀಡಾಪಟುಗಳನ್ನು ಗೌರವಿಸಿ ಇಬ್ಬರೂ ಕ್ರೀಡಾಪಟುಗಳಿಗೂ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದರು. ಈ ವೇಳೆ ಸಚಿವ ಚೆಲುವರಾಯಸ್ವಾಮಿ ಮತ್ತು ಒಲಂಪಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷರೂ ಆದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

 

Tags:
error: Content is protected !!