Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಚೆಕ್‌ ಬೌನ್ಸ್‌ ಪ್ರಕರಣ: ಕ್ರಿಕೆಟಿಗ ಶಕೀಬ್‌ ವಿರುದ್ಧ ಬಂಧನ ವಾರೆಂಟ್‌ ಜಾರಿ

ಢಾಕಾ: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಆಟಗಾರ ಶಕೀಬ್‌ ಅಲ್‌ಹಸನ್‌ ವಿರುದ್ಧ ಬಾಂಗ್ಲಾದ ಮುಖ್ಯ ಮೆಟ್ರೋಪಾಲಿಟನ್‌ ನ್ಯಾಯಾಲಯವು ಬಂಧನದ ವಾರೆಂಟ್‌ ಹೊರಡಿಸಿದೆ ಎಂದು ಸುದ್ದಿಯಾಗಿದೆ.

ಶಕೀಬ್‌ ಹಲ್‌ ಹಸನ್‌ 26 ಲಕ್ಷ ಮೊತ್ತವನ್ನು ಚೆಕ್‌ಗಳ ಮೂಲಕ ಪಾವತಿಸಲು ವಿಫಲವಾಗಿದ್ದಾರೆ ಎಂದು ಬಾಂಗ್ಲಾದೇಶದ ಐಎಫ್‌ಐಸಿ ಬ್ಯಾಂಕ್‌ ಅಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯವು ಶಕೀಬ್‌ ಅವರಿಗೆ ಹಲವು ಬಾರಿ ನೋಟಿಸ್‌ ಜಾರಿ ಮಾಡಿದರು ವಿಚಾರಣೆಗೆ ಗೈರಾಗಿದ್ದರು ಎಂದು ತಿಳಿದು ಬಂದಿದೆ.

ಈಚೆಗೆ ಶಕೀಬ್‌ ಬೌಲಿಂಗ್‌ ಶೈಲಿಯ ಪರೀಕ್ಷೆಗೆ ಒಳಗಾಗಿ ವಿಫಲರಾಗಿ, ದೇಶಿಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳ್ಳುವ ಮೂಲಕ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಗುಳಿದಿದ್ದಾರೆ.

Tags:
error: Content is protected !!