Mysore
26
few clouds

Social Media

ಮಂಗಳವಾರ, 27 ಜನವರಿ 2026
Light
Dark

ವಕ್ಫ್‌ ಬೋರ್ಡ್‌ ರದ್ದುಗೊಳಿಸುವಂತೆ ಆಗ್ರಹಿಸಿ ನಾಳೆ ಶ್ರೀರಂಗಪಟ್ಟಣ ಬಂದ್‌

ಮಂಡ್ಯ: ರೈತರಿಗೆ ಮಾರಕವಾಗಿರುವ ವಕ್ಫ್‌ ಬೋರ್ಡ್‌ ಕಾಯಿದೆಯನ್ನು ಸರ್ಕಾರ ರದ್ದುಪಡಿಸುವಂತೆ ಆಗ್ರಹಿಸಿ ನಾಳೆ ಶ್ರೀರಂಗಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ.

ಶ್ರೀರಂಗಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಕೃಷಿ ಜಮೀನು, ಸರ್ಕಾರಿ ಕಟ್ಟಡ ಮತ್ತು ಸ್ಮಾರಕಗಳ ಪಹಣಿಗಳಲ್ಲಿ ವಕ್ಫ್‌ ಮಂಡಳಿ ಎಂದು ನಮೂದು ಮಾಡಿರುವುದನ್ನು ವಿರೋಧಿಸಿ ನಾಳೆ ಶ್ರೀರಂಗಪಟ್ಟಣ ಬಂದ್‌ಗೆ ಮಂಡ್ಯ ಜಿಲ್ಲಾ ವಕ್ಫ್‌ ವಿರೋಧಿ ರೈತ ಒಕ್ಕೂಟ ಕರೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ರೈತ ಒಕ್ಕೂಟದ ಸದಸ್ಯರು, ರೈತರಿಗೆ ಮಾರಕವಾಗಿರುವ ವಕ್ಫ್‌ ಬೋರ್ಡ್‌ ಕಾಯಿದೆಯನ್ನು ಸರ್ಕಾರ ರದ್ದುಪಡಿಸಬೇಕು. ಸಾಧ್ಯವಾದರೆ ವಕ್ಫ್‌ ಮಂಡಳಿಯನ್ನೇ ರದ್ದು ಮಾಡಿ ಜನರ ಜೊತೆ ನಿಲ್ಲಬೇಕು. ಈ ಹಿನ್ನೆಲೆಯಲ್ಲಿ ನಾಳೆ ಶ್ರೀರಂಗಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಅದಕ್ಕೂ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಹಿನ್ನೆಲೆಯಲ್ಲಿ ನಾಳಿನ ಬಂದ್‌ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Tags:
error: Content is protected !!