Mysore
27
few clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

2025ರ ಮೊದಲ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವನ್ನು ಶ್ಲಾಘಿಸಿದರು.

ಪ್ರಧಾನ ಮಂತ್ರಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರವಾಗುತ್ತದೆ. ಆದರೆ ಮುಂದಿನ ವಾರ ಭಾನುವಾರದಂದು ಗಣರಾಜ್ಯೋತ್ಸವ ಆಚರಣೆಯಿಂದಾಗಿ ಈ ತಿಂಗಳು ಮೂರನೇ ಭಾನುವಾರದಂದೇ ಕಾರ್ಯಕ್ರಮ ಪ್ರಸಾರವಾಯಿತು.

2025ರ ಮೊದಲ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕುಂಭಮೇಳವನ್ನು ವಿವಿಧತೆಯಲ್ಲಿ ಏಕತೆಯ ಹಬ್ಬ ಎಂದು ಬಣ್ಣಿಸಿದರು. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಆರಂಭವಾಗಿದೆ. ಮರೆಯಲಾಗದ ಮಾನವೀಯತೆಯ ಸಮುದ್ರದಂತೆ ಕಾಣುತ್ತದೆ, ನಂಬಲಾರದ ದೃಶ್ಯಗಳು ಮತ್ತು ಸಮಾನತೆ ಮತ್ತು ಸಾಮರಸ್ಯದ ಅಸಾಧಾರಣ ಸಂಗಮವಾಗಿದೆ. ಈ ಬಾರಿ ಕುಂಭದಲ್ಲಿ ಅನೇಕ ದೈವಿಕ ಜೋಡಣೆ ಕೂಡ ಸೇರುತ್ತಿದೆ. ಈ ಕುಂಭೋತ್ಸವವು ವಿವಿಧತೆಯಲ್ಲಿ ಏಕತೆಯ ಹಬ್ಬವನ್ನು ಆಚರಿಸುತ್ತದೆ ಎಂದು ಹೇಳಿದರು.

ಇನ್ನು ಜನವರಿ.23ರಂದು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮದಿನವನ್ನು ಪರಾಕ್ರಮ್‌ ದಿವಸ್‌ ಎಂದು ಆಚರಿಸುವ ಮುನ್ನ ಪ್ರಧಾನಿ ಮೋದಿ ಅವರು ಸುಭಾಷ್‌ ಚಂದ್ರ ಬೋಸ್‌ ಅವರ ಶೌರ್ಯವನ್ನು ಸ್ಮರಿಸಿದರು. ಯುವಕರು ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆಯಬೇಕೆಂದು ಒತ್ತಾಯಿಸಿದರು.

 

Tags: