Mysore
22
scattered clouds

Social Media

ಮಂಗಳವಾರ, 01 ಸೆಪ್ಟೆಂಬರ್ 2026
Light
Dark

ಸೈಫ್‌ ಅಲಿ ಹತ್ಯೆಗೆ ಯತ್ನ ಪ್ರಕರಣ: ಆರೋಪಿ ಬಂಧನ

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಶುಕ್ರವಾರ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ನಡೆದ 30 ಗಂಟೆಯ ಬಳಿಕ ಆರೋಪಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ದಾಳಿ ಮಾಡಿದರ ಹಿಂದಿನ ಉದ್ದೇಶವೇನು? ಸೈಫ್‌ ಮನೆ ತಲುಪಿದ್ದು ಹೇಗೆ? ದಾಳಿ ಹಿಂದೆ ಬೇರೆ ಯಾರಾದ್ದಾರೂ ಕೈವಾಡ ಇದೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯು ಗುರುವಾರ ನಸುಕಿನ ಜಾವ ಸೈಫ್‌ ಮನೆಗೆ ನುಗ್ಗಿ, ಸೈಫ್‌ ಕಿರಿಯ ಪುತ್ರನ ಕೊಠಡಿಗೆ ತೆರಳಿ, ಒಂದು ಕೋಟಿ ಹಣ ನೀಡದಿದ್ದರೆ ಮಗುವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಈ ವೇಳೆ ಕೂಗಾಟ ಕೇಳಿ ಕೊಠಡಿಗೆ ಬಂದ ಸೈಫ್‌ ಮಗನ ರಕ್ಷಣೆಗೆ ಮುಂದಾಗಿದ್ದು, ಆವಾಗ ಆರೋಪಿ ಸೈಫ್‌ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಸೈಫ್‌ ಅಲಿಖಾನ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನ ಪೊಲೀಸರು ಘಟನೆಯ ಬಗ್ಗೆ ತಿಳಿದು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಫೋಟೊವನ್ನು ಬಿಡುಗಡೆ ಮಾಡಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags:
error: Content is protected !!