Mysore
21
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ʼಕಾಟನ್‌ ಕ್ಯಾಂಡಿʼ ಸಾಂಗ್‌ ವಿವಾದ: ಕಾನೂನು ಸಮರಕ್ಕೆ ಸಿದ್ಧ ಎಂದ ರ‍್ಯಾಪರ್ ಚಂದನ್‌ ಶೆಟ್ಟಿ

ಹುಬ್ಬಳ್ಳಿ: ಕಾಟನ್‌ ಕ್ಯಾಂಡಿ ಹಾಡಿನ ಕೆಲವು ತುಣುಕುಗಳನ್ನು ಕದಿಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಗಾಯಕ ಚಂದನ್‌ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಹಾಡು, ಹಾಡಿನ ಸಾಲನ್ನು ಕದ್ದಿಲ್ಲ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಕಾಕತಾಳಿಯ. ಯಾವುದೇ ವಿವ್ಸ್‌ ಇಲ್ಲದ ಸಾಂಗ್‌ ಕದ್ದು ಹಾಡು ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ಬಹಳಷ್ಟು ಕಷ್ಟಪಟ್ಟು ಈ ಹಾಡು ಮಾಡಿದ್ದೇನೆ. ಈ ಕುರಿತು ಕಾನೂನು ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಇನ್ನು ಹೊಸ ವರ್ಷಕ್ಕೆ ಚಂದನ್‌ ಶೆಟ್ಟಿ ತಾವು ಟ್ಯೂನ್‌ ಮಾಡಿದ ʼಕಾಟನ್‌ ಕ್ಯಾಂಡಿʼ ಸಾಂಗ್‌ ಅನ್ನು ರಿಲೀಸ್‌ ಮಾಡಿದ್ದರು. ಈ ಟ್ಯೂನ್‌ 6 ವರ್ಷಗಳ ಹಿಂದೆ ನಾನು ಮಾಡಿದ್ದು ಎಂದು ಯುವರಾಜ್‌ ಹೇಳಿದ್ದಾರೆ. ನಾನು ಕಷ್ಟಪಟ್ಟು ಮಾಡಿದ್ದ ವೈ ಬುಲ್‌ (Y Bull) ಪಾರ್ಟಿ ಸಾಂಗ್‌ ಟ್ಯೂನ್‌ನ ಮೊದಲ ಪಲ್ಲವಿ, ಸೆಕೆಂಡ್‌ ಚರಣವನ್ನು ಚಂದನ್‌ ಶೆಟ್ಟಿ ಕಾಪಿ ಮಾಡಿದ್ದಾರೆ ಎಂದು ಯುವರಾಜ್‌ ಗಂಭೀರ ಆರೋಪ ಮಾಡಿದ್ದಾರೆ.

Tags:
error: Content is protected !!