Mysore
26
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

60% ಕಮಿಷನ್‌ ಆರೋಪ: ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ ಎಚ್‌ಡಿಕೆ

ನವದೆಹಲಿ: ದಾಖಲೆ ಕೊಡಿ ದಾಖಲೆ ಕೊಡಿ ಎಂದು ಹೇಳುತ್ತೀರಾ! ಇಲ್ನೋಡಿ ನಿಮ್ಮ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಎಂದು ಹೇಳುವ ಮೂಲಕ 60% ಕಮಿಷನ್‌ ಆರೋಪವನ್ನು ತೀವ್ರಗೊಳಿಸಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಟ್ಯಾಗ್‌ ಮಾಡಿ ಸರ್ಕಾರದ ವಿರುದ್ಧ ಪರ್ಸೆಂಟೇಜ್‌ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ನಡೆಸಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿಬೇಕಾ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರರಿಗೆ 32,000 ಕೋಟಿಯಷ್ಟು ಬಿಲ್‌ ಬಾಕಿ ಇದೆ. ಸಾಲ ಮಾಡಿ ಗುತ್ತಿಗೆದಾರರು ಕಾಮಗಾರಿ ನಡೆಸಿದರೆ, ಅವರ ಮೇಲೂ ನಿಮ್ಮ ಪರ್ಸೆಂಟೇಜ್‌ ಕರಿನೆರಳು ಬಿದ್ದಿದೆ. ನಿಮಗೆ ಪರ್ಸೆಂಟೇಜ್‌ ನೀಡಲೂ ಆಗದೇ ಗುತ್ತಿಗೆದಾರರು ದಯಾಮರಣ ಅರ್ಜಿ ಬರೆಯುತ್ತಿದ್ದಾರೆ ಎಂದು ಎಚ್‌ಡಿಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಜಲ ಸಂಪನ್ಮೂಲ: 14,600 ಕೋಟಿ, ಲೋಕೋಪಯೋಗಿ 10,000 ಕೋಟಿ, ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ 3100 ಕೋಟಿ, ಸಣ್ಣ ನೀರಾವರಿ 2800 ಕೋಟಿ, ಇತರೆ ಇಲಾಖೆ 1500 ಕೋಟಿ ಸೇರಿ ಒಟ್ಟು 32,000 ಕೋಟಿ ರೂಪಾಯಿ ಬಾಕಿ ಇದೆ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.

ಭಂಡತನ ಬಿಟ್ಟು ತಪ್ಪನ್ನು ಒಪ್ಪಿಕೊಂಡು ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿಯ ಕಡೆ ಗಮನ ಹರಿಸಿ. ನನ್ನ ಮೇಲೆ ನಿಮ್ಮ ಸಂಪುಟ ವಾಗ್ಯುದ್ಧಕ್ಕಿಳಿದರೆ ಪ್ರಯೋಜನವಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.

Tags:
error: Content is protected !!