ಪೋರ್ ಬಂದರ್: ಗುಜರಾತ್‌ನ ಪೋರ್ ಬಂದರ್‌ನಲ್ಲಿ ಎಎಲ್‌ಎಚ್ ಧ್ರುವ್ ಎಂಬ ಹೆಸರಿನ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಈ ದುರ್ಘಟನೆಯೂ ಪೈಲಟ್‌ಗಳಿಗೆ ತರಬೇತಿ ನೀಡುವ ಸಮಯದಲ್ಲಿ ನಡೆದಿದ್ದು, ಮೂವರು ಸಿಬ್ಬಂದಿಗಳು ಗಂಭೀರ ಗಾಯಗೊಂಡಿದ್ದರು. ಈ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ನಿಂದ ಹೊರಕ್ಕೆ ತಂದು ಪೋರ್ ಬಂದರ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಕಮಲಾ ಬಾಗ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜೇಶ್ ಕಾನ್ಮಿಯಾ ಮಾತನಾಡಿ, ಈ ಘಟನೆ ಸಂಭವಿಸಿದ ನಂತರ ಮೂವರು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಿಬ್ಬಂದಿಗಳು ಗಂಭೀರವಾಗಿ ಸುಟ್ಟ ಸ್ಥಿತಿಯಲ್ಲಿದ್ದರಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.





