Mysore
18
broken clouds

Social Media

ಭಾನುವಾರ, 11 ಜನವರಿ 2026
Light
Dark

ವಿಚಾರಗೋಷ್ಠಿಯ ಪ್ರಚಾರ ವಾಹನಕ್ಕೆ ಚಾಲನೆ

ನಾಳೆ  “ಸಂವಿಧಾನವನ್ನು ಬದಲಾಯಿಸಿದ್ದು ಯಾರು” ಎಂಬ ವಿಚಾರ ಗೋಷ್ಠಿ

ಮೈಸೂರು: ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಜ.5 ರ ಭಾನುವಾರ  ನಗರದ ಜೆ ಕೆ ಮೈದಾನದಲ್ಲಿ ನಡೆಯಲಿರುವ ʻಸಂವಿಧಾನ ಬದಲಾಯಿಸಿದವರು ಯಾರು?ʼ ಎಂಬ ಪುಸ್ತಕದ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಸಾರ್ವಜನಿಕರು, ವಿದ್ಯಾವಂತರು, ಸಮಾಜದ ಚಿಂತಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲೆಂದು ಆಮಂತ್ರಣ ಪತ್ರಗಳನ್ನು ವಿತರಿಸುವ ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.

ಗೋಷ್ಠಿಯಲ್ಲಿ ಬಿಹಾರದ ರಾಜ್ಯಪಾಲ  ಆರಿಫ್ ಮೊಹಮ್ಮದ್ ಖಾನ್ ಹಾಗೂ ಮಾಜಿ ಉಪಮುಖ್ಯಮಂತ್ರಿಗೋವಿಂದ ಕಾರಜೋಳ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,  ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ, ಪುಸ್ತಕ ಲೇಖಕ ವಿಕಾಸ್ ಪುತ್ತೂರು ಹಾಗೂ ಬಿಜೆಯ ನಾಯಕರು ಭಾಗವಹಿಸಲಿದ್ದಾರೆ.

ನಮ್ಮ ದೇಶದಲ್ಲಿ ಸಂವಿಧಾನ ಭಕ್ತಿಯಿಂದ ನೋಡುವಂತಹ ಶ್ರೇಷ್ಠವಾದ ಗ್ರಂಥ. ಆದರೆ ಇತ್ತೀಚಿಗೆ ಕಾಂಗ್ರೆಸ್  ಅದರ ಶ್ರೇಷ್ಠತೆಯನ್ನೇ ಹಾಳುಮಾಡುವ ರೀತಿಯಲ್ಲಿ ಸಂವಿಧಾನವನ್ನು ಚುನಾವಣಾ ಸರಕಾಗಿ ಉಪಯೋಗಿಸುತ್ತಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆವುಂಟು ಮಾಡಿದ ಕಾಂಗ್ರೆಸ್ ಈಗ ಅದನ್ನು ಮುಚ್ಚಿಹಾಕಲು ಮತ್ತೊಬ್ಬರಿಂದ ಸಂವಿಧಾನಕ್ಕೆ ಧಕ್ಕೆಯಾಗಲಿದೆ ಎನ್ನುವ ಸುಳ್ಳು ಆತಂಕವನ್ನು ಸಮಾಜದಲ್ಲಿ ನಿರ್ಮಾಣ ಮಾಡುತ್ತಿದೆ. ಇಂತಹ ಸುಳ್ಳುಗಳ ನಡುವೆ ನಿಜವಾಗಿಯೂ ಸಂವಿಧಾನವನ್ನು ಬದಲಾಯಿಸಿದವರು ಯಾರು ಎಂದು ತಿಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಾರ್ಯಕರ್ತರು ಕರೆ ನೀಡಿದರು.

ಈ ಸಂಧರ್ಭದಲ್ಲಿ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿಮಂಜು, ಕೆ.ಆರ್. ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಮುಖಂಡರುಗಳಾದ ಅಜಯ್ ಶಾಸ್ತ್ರಿ, ವರುಣ್, ಪ್ರಶೀಕ್, ರವಿಕುಮಾರ್, ಶ್ರೇಯಸ್ ಮಹಾನ್, ಸಾಯಿಕುಮಾರ್, ರಂಜನ್, ಮಿತುನ್ ಹಾಗು ಇನ್ನಿತರರು ಇದ್ದರು.

Tags:
error: Content is protected !!