Mysore
27
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮನು ಭಾಕರ್‌, ಡಿ.ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಪ್ರಶಸ್ತಿ ಘೋಷಣೆ

ಹೊಸದಿಲ್ಲಿ: ಎರಡು ಒಲಿಂಪಿಕ್‌ನಲ್ಲಿ ಪದಕ ಗೆದ್ದ  ಮನು ಭಾಕರ್‌,  ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದ ಡಿ.ಗುಕೇಶ್‌ ಸೇರಿದಂತೆ ನಾಲ್ವರು  ಕ್ರೀಡಾಪಟುಗಳಿಗೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ಒಲಿದು ಬಂದಿದೆ. ಈ ಬಗ್ಗೆ ಗುರುವಾರ ಕ್ರೀಡಾ ಸಚಿವಾಲಯವು ಅಧಿಕೃತವಾಗಿ ಘೋಷಣೆ ಮಾಡಿದೆ.

ಒಲಂಪಿಕ್‌ ಶೂಟಿಂಗ್‌ನಲ್ಲಿ 2 ಕಂಚಿನ ಪದಕ ಗೆದ್ದ ಮನು ಭಾಕರ್‌, ವಿಶ್ವ ಚೆಸ್‌ ಚಾಂಪಿಯನ್‌ ಡಿ. ಗುಕೇಶ್‌, ಪ್ಯಾರಾಂಲಿಪಿಕ್ಸ್‌ ಪ್ರವೀಣ್‌ ಕುಮಾರ್ ಹಾಗೂ‌ ಭಾರತದ ಹಾಕಿ ತಂಡದ ನಾಯಕ ಹರ್ಮನ್‌ ಪ್ರೀತ್‌ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜ.17ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾಪಟುಗಳಿಗೆ ಖೇಲ್‌ ರತ್ನ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಕ್ರಮಬದ್ಧವಾದ ಪರಿಶೀಲನೆಯ ನಂತರ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಕ್ರೀಡಾಪಟುಗಳು, ತರಬೇತಿದಾರರು, ವಿಶ್ವವಿದ್ಯಾಲಯ ಮತ್ತು ಘಟಕಗಳಿಗೆ ಪ್ರಶಸ್ತಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕ್ರೀಡಾ ಸಚಿವಾಲಯ ಹೇಳಿದೆ.

Tags:
error: Content is protected !!