Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ.

ಈ ಮೂಲಕ ಈಗ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಅಯೋಧ್ಯೆ ರಾಮಮಂದಿರ ಹೊರಹೊಮ್ಮಿದೆ.

ಅಯೋಧ್ಯೆ ರಾಮಮಂದಿರವು ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈ ಮೂಲಕ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಅಗ್ರ ಸ್ಥಾನದಲ್ಲಿದ್ದ ತಾಜ್‌ಮಹಲ್‌ನ್ನು ರಾಮಮಂದಿರ ಹಿಂದಿಕ್ಕಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ದಿನದಿಂದಲೂ ಉತ್ತರ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಹೊಸ ದಾಖಲೆಯನ್ನು ಬರೆದಿದೆ.

2024ರ ಜನವರಿಯಿಂದ ಸೆಪ್ಟೆಂಬರ್‌ ನಡುವೆ 47.61 ಕೋಟಿ ಪ್ರವಾಸಿಗರು ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಇವರ ಪೈಕಿ ಅಯೋಧ್ಯೆಗೆ 13.55 ಕೋಟಿ ಮಂದಿ ಪ್ರವಾಸ ಮಾಡಿದ್ದಾರೆ. ಇದೆಲ್ಲದರ ಜೊತೆಗೆ 3153 ವಿದೇಶಿ ಪ್ರವಾಸಿಗರು ಕೂಡ ರಾಮಮಂದಿರವನ್ನು ಕಣ್ತುಂಬಿಕೊಂಡಿದ್ದಾರೆ.

ಇದೇ ಅವಧಿಯಲ್ಲಿ ಆಗ್ರಾದಲ್ಲಿ ತಾಜ್‌ಮಹಲ್‌ಗೆ 12.51 ಕೋಟಿ ಜನರು ಭೇಟಿ ನೀಡಿದ್ದಾರೆ.

ಕೇವಲ ಒಂಭತ್ತು ತಿಂಗಳಿನಲ್ಲೇ ಉತ್ತರ ಪ್ರದೇಶ ಈ ಸಾಧನೆ ಮಾಡಿರುವುದಕ್ಕೆ ಪ್ರವಾಸೋದ್ಯಮ ಸಚಿವ ಜೈವೀರ್‌ ಸಿಂಗ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

 

Tags: