Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಂಡ್ಯದಲ್ಲಿ ಬರ್ಬರ ಕೊಲೆ ಪ್ರಕರಣ: ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಪಾತಕಿ

ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್‌ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್‌ ವಿಚಾರ ಬಾಯ್ಬಿಟ್ಟಿದ್ದಾನೆ.

ಶ್ರೀರಂಗಪಟ್ಟಣ ನಿವಾಸಿಯಾಗಿರುವ ಆರೋಪಿ ಇಬ್ರಾಹಿಂ, ಆನ್‌ಲೈನ್‌ ಗೇಮ್‌ಗೆ ಸಿಲುಕಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ದರೋಡೆಗೆ ಬಿಗ್‌ ಪ್ಲ್ಯಾನ್‌ ಮಾಡಿದ್ದ.

ದರೋಡೆಗಾಗಿ ಮರ ಕತ್ತರಿಸುವ ಯಂತ್ರದೊಂದಿಗೆ ಮನೆಯೊಂದಕ್ಕೆ ಬಂದಿದ್ದ. ಒಂಟಿ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನಕ್ಕಿಳಿದಿದ್ದ ಎಂಬ ಮಾಹಿತಿ ಆತನಿಂದಲೇ ಹೊರಬಂದಿದೆ.

ಕ್ಯಾತನಹಳ್ಳಿ ಬಳಿಯಿರುವ ಒಂಟಿ ಮನೆಗೆ ಬಂದಿದ್ದ ಇಬ್ರಾಹಿಂ, ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ತೋಟದ ಮನೆಯಲ್ಲಿ ವಯಸ್ಸಾದ ದಂಪತಿ ಇದ್ದಿದ್ದರಿಂದ ಕೊಲೆಗೈದು ದರೋಡೆಗೆ ಯತ್ನಿಸಿದ್ದ.

ಗಂಭೀರ ಗಾಯವಾದರೂ ಕುಗ್ಗದ ಯಶೋಧಮ್ಮ ಮನೆಯಿಂದ ಹೊರಬಂದು ಬಾಗಿಲು ಲಾಕ್‌ ಮಾಡಿದ್ದರು. ಇತ್ತ ಮನೆಯ ಒಳಗೆಯೇ ರಮೇಶ್‌ ಎಂಬುವವರನ್ನು ಮನಸೋ ಇಚ್ಛೆ ಮರ ಕತ್ತರಿಸುವ ಯಂತ್ರದಿಂದ ರಮೇಶ್‌ ಕೊಲೆ ಮಾಡಿದ್ದಾನೆ.

ಇನ್ನು ತೋಟದ ಮನೆಯಲ್ಲಿ ಭೀಕರ ಕೊಲೆ ನಡೆದಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Tags: