ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್ ಶಾ ಅವರ ಫೇಕ್ ಎನ್‌ಕೌಂಟರ್‌ಗೆ ಹೆಸರುವಾಸಿಯಾಗಿರುವಂತೆ ಆಗಿದೆ ಎಂದು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.
ಇಲ್ಲಿನ ಕೆಪಿಪಿಸಿ ಕಚೇರಿಯಲ್ಲಿ ಇಂದು(ಡಿಸೆಂಬರ್.22) ಸುದ್ದಿಗೋಷ್ಠಿ ನಡೆಸಿ ಪ್ರಹ್ಲಾದ್ ಜೋಶಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೇಕ್ ಎನ್‌ಕೌಂಟರ್‌ಗೆ ಹೆಸರುವಾಸಿಯಾಗಿದೆಯೇ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮಿತ್ ಶಾ ಅವರಂತೆಯೇ ಪ್ರಹ್ಲಾದ್ ಜೋಶಿ ಕೂಡ ಅದೇ ಸಂತತಿಗೆ ಸೇರಿದ್ದಾರೆ. ಫೇಕ್ ಎನ್‌ಕೌಂಟರ್‌ಗೆ ಹೆಸರುವಾಸಿ ಅಮಿತ್ ಶಾ ಅವರೇ ಹೇಳಿಕೊಟ್ಟ ಪಾಠವನು ಜೋಶಿಯವರು ಇಲ್ಲಿ ಹೇಳಿದ್ದಾರೆ ಅಷ್ಟೇ. ಬಿಜೆಪಿ ಅವರು ಮಹಾತ್ಮ ಗಾಂಧೀಜಿ ಸೇರಿದಂತೆ ರಾಹುಲ್ ಗಾಂಧಿ ಅವರ ಬಗ್ಗೆಯೂ ಅಪ್ರಚಾರ ಮಾಡಿದ್ದರೂ ಅಂತೆಯೇ ಬಹಳ ಯೋಚನೆ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆಯೂ ಲೆಕ್ಕಾಚಾರ ಹಾಕಿಕೊಂಡು ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಹ್ಲಾದ್ ಜೋಶಿ ಅವರು ಸಹ ಇಂತಹ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.