Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರು ತಿಳಿಸಿದ್ದಾರೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಇಂದು(ಡಿಸೆಂಬರ್‌.22) ಆಯೋಜಿಸಿದ್ದ “ಸ್ತ್ರೀ ಎಂದರೆ ಅಷ್ಟೇ ಸಾಕೇ?” ವಿಷಯದ ಗೋಷ್ಠಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಹೆಣ್ಣಿಗೆ ಹೋರಾಟದ ಮನೋಭಾವ ಬರಬೇಕು. ಹೆಣ್ಣು ಪ್ರತಿಯೊಂದು ವಿಷಯದಲ್ಲೂ ವಜ್ರದಂತೆ ಕಠಿಣವಾಗಬೇಕು ಎಂದಿದ್ದಾರೆ.

ಹೆಣ್ಣಿನ ಮೇಲಾಗುವ ದೌರ್ಜನ್ಯ, ಅಪಾರಧ ತಡೆಗೆ ನಮ್ಮಲ್ಲಿ ಕಠಿಣ ಕಾನೂನಿದೆ. ಆದರೆ ದೌರ್ಜನ್ಯ ಆದಾಗ ಕಾನೂನು ಹೋರಾಟಕ್ಕೆ ಹೆಣ್ಣು ಹಿಂದೇಟು ಹಾಕುತ್ತಿದ್ದಾಳೆ. ಅಲ್ಲದೇ ನಾನಾ ಒತ್ತಡಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂಜರಿಯುತ್ತಾಳೆ. ಹೆಣ್ಣು ತಾನು ಎಲ್ಲಿಯವರೆಗೂ ಕಾನೂನು ಹೋರಾಟಕ್ಕೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ದೌರ್ಜನ್ಯ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಹೆಣ್ಣಿಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಲ ತುಂಬಿದ್ದು ಡಾ. ಬಿ.ಆರ್.ಅಂಬೇಡ್ಕರ್, ಸ್ತ್ರೀ ಚಳವಳಿ ಆರಂಭವಾಗಿದ್ದು ಬಸವಣ್ಣನವರ ಕಾಲದಲ್ಲಿ. ಹೆಣ್ಣಿಗೆ ಶಕ್ತಿ ನೀಡಬೇಕೆಂದರೆ ಅವಳಿಗೆ ವೇದಿಕೆ ಸಿಗಬೇಕು ಎಂದು ತಿಳಿಸಿದ್ದಾರೆ.

Tags: