Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನ್ಯೂ ಇಯರ್‌ ಸೆಲಬ್ರೇಷನ್ | ಬೆಂಗಳೂರು ಪೊಲೀಸರಿಂದ ಹೊಸ ನಿಯಮ

ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ

ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್‌ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಪೊಲೀಸ್‌ ಇಲಾಖೆ ಹೊಸ ವರ್ಷದ ಸೆಲೆಬ್ರೇಷನ್‌ನಲ್ಲಿ ಯಾವುದೇ ಅನಾಹುತಗಳು ಸಂಭವಿಸಬಾರದು ಎಂದು ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಈಗಾಗಲೇ ಪಾಲಿಕೆ ಅಧಿಕಾರಿಗಳು ಹಾಗೂ ಬೆಂಗಳೂರು ಪೊಲೀಸರು ಜೊತೆಯಾಗಿ ಸಭೆ ನಡೆಸಿದ್ದು, ಹೊಸ ನಿಯಮಗಳನ್ನು ಸಿದ್ದಪಡಿಸಿದ್ದಾರೆ.

ನ್ಯೂ ಇಯರ್‌ನ ಕೇಂದ್ರ ಬಿಂದುವಾಗಿರುವ ಎಂ.ಜಿ.ರೋಡ್‌, ಬ್ರಿಗೇಡ್‌ ರೋಡ್‌ಗಳಲ್ಲಿ ಈ ಬಾರಿ ಸುರಕ್ಷತೆ ದೃಷ್ಠಿಯಿಂದ ಹೆಚ್ಚು ಸಿಸಿ ಟಿವಿ ಕ್ಯಾಮರಾ ಅಳವಡಿಸಲು ಪೊಲೀಸರು, ಪಾಲಿಕೆಗೆ ಸೂಚನೆ ನೀಡಿದ್ದಾರೆ. ಹೋದ ವರ್ಷ ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆ ಕಡಿಮೆಯಿತ್ತು. ಈ ಬಾರಿ 800ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸ್‌ ಇಲಾಖೆ, ಪಾಲಿಕೆಗೆ ಸೂಚಿಸಿದೆ.

ಹೊಸ ವರ್ಷಾಚರಣೆಗೆ ಹೊಸ ನಿಯಮಗಳು

* ರಾತ್ರಿ 1 ಗಂಟೆಯೊಳಗೆ ನ್ಯೂ ಇಯರ್‌ ಪಾರ್ಟಿ ಮುಗಿಸಬೇಕು

* ಎಂ.ಜಿ. ರೋಡ್‌, ಬ್ರಿಗೇಡ್‌ ರೋಡ್‌, ಇಂದಿರಾ ನಗರದಲ್ಲಿ ಸೆಲಬ್ರೇಷನ್‌ಗೆ ಅನುಮತಿ

* ರಾತ್ರಿ 10ಗಂಟೆ ಬಳಿಕ ಫ್ಲೈ ಓವರ್‌ಗಳು ಬಂದ್‌

* 800 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾಗಳ ಅಳವಡಿಕೆಗೆ ಸೂಚನೆ

* ರಾತ್ರಿ 8ಗಂಟೆ ಬಳಿಕ ಆಚರಣೆ ನಡೆಯುವ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌

* ಆಚರಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ

* ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ

* ಬಾರ್‌, ಪಬ್‌ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್‌ಗೆ ಸೂಚನೆ

* ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ

* ಲೌಡ್‌ ಸ್ಪೀಕರ್‌, ಪಟಾಕಿ ಸಿಡಿಸಲು ನಿರ್ಬಂಧ

ಈ ನಿಯಮಗಳ ಜೊತೆಯಲ್ಲಿ ಇನ್ನು ಹಲವು ನಿಯಮಗಳನ್ನು ಜಾರಿ ಮಾಡಿ ಈ ವರ್ಷದ ಆಚರಣೆಗೆ ಯಾವುದೇ ಆಡಚಣೆ ಉಂಟಾಗದಂತೆ ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

Tags: