ಬಾಗಲಕೋಟೆ: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿ, ಫೇಕ್ ಎನ್‌ಕೌಂಟರ್ ಮಾಡುವ ಉದ್ದೇಶವಿತ್ತು ಎಂದೆನ್ನಿಸುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು(ಡಿಸೆಂಬರ್.22) ಸಿ.ಟಿ.ರವಿ ಬಂಧನದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ ತಕ್ಷಣ ಮ್ಯಾಜಿಸ್ಟ್ರೇಟ್‌ರ(ನ್ಯಾಯಾಧೀಶರು) ಮುಂದೆ ಹಾಜರುಪಡಿಸಬೇಕಿತ್ತು. ಅದನ್ನು ಬಿಟ್ಟು ಬೆಳಗಾವಿ ಪೊಲೀಸ್ ಕಮಿಷನರ್ ತನಗೆ ಸಂಬಂಧವಿಲ್ಲದಿರುವ ವ್ಯಕ್ತಿಯನ್ನು ತಮ್ಮ ದುಷ್ಟಯೋಜನೆಯಿಂದ ಬೇರೆ ಬೇರೆ ತಾಲ್ಲೂಕಿನೊಳಗೆ ರಾತ್ರಿ ಇಡೀ ಸುತ್ತಾಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಹುಶಃ ಸಿ.ಟಿ.ರವಿ ಅವರನ್ನು ಅವಕಾಶ ಸಿಕ್ಕರೆ ಮುಗಿಸಬೇಕೆಂಬ ಉದ್ದೇಶ ಪೊಲೀಸ ಅವರಿಗಿತ್ತು ಎಂದೆನಿಸುತ್ತದೆ. ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ. ಅವಕಾಶ ಸಿಕ್ಕಿದ್ದರೆ ಫೇಕ್ ಎನ್‌ಕೌಂಟರ್ ಮಾಡುತ್ತಿದ್ದರು ಎಂದು ಅನಿಸುತ್ತದೆ ಎಂದು ಆರೋಪಿಸಿದ್ದಾರೆ.
ಇನ್ನು ಪೊಲೀಸರು, ಸಿ.ಟಿ.ರವಿ ಅವರನ್ನು ಬಂಧಿಸಿದ ತಕ್ಷಣ ನಮ್ಮ ಪಕ್ಷದ ವಿಧಾನ ಪರಿಷತ್ ಶಾಸಕ ಕೇಶವ್ ಪ್ರಸಾದ್ ಅವರು ಸತತವಾಗಿ ಹಿಂದೆಯಿದ್ದರು. ಅಲ್ಲದೇ ಮಾಧ್ಯಮದವರು ರಾತ್ರಿ ಇಡೀ ಪೊಲೀಸರು ಸಿ.ಟಿ.ರವಿ ಅವರನ್ನು ಸುತ್ತಾಡಿಸಿದ್ದನ್ನು ಲೈವ್ ಲೋಕ್ಷನ್ ನೀಡುತ್ತಿದ್ದರು. ಹೀಗಾಗಿ ಅವರಿಗೆ ನಾವು ಧನ್ಯವಾದ ತಿಳಿಸಬೇಕು ಎಂದು ಹೇಳಿದ್ದಾತೆ.