Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಂಚನೆ ಆರೋಪ: ಸ್ಪಷ್ಟನೆ ನೀಡಿದ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ

ಬೆಂಗಳೂರು:  ಸಾರ್ವಜನಿಕರಿಗೆ ಪಿಎಫ್ ಹಣ ವಂಚನೆ ಮಾಡಿದ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.

ಪಿಎಫ್ ಹಣವನ್ನು ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ನಾನು ಯಾರಿಗೂ ಕೂಡ ಹಣ ವಂಚನೆ ಮಾಡಿಲ್ಲ. ಇದರಲ್ಲಿ ನನ್ನ ನೇರವಾದ ಪಾತ್ರ ಇಲ್ಲ. ನಾನೇಕೆ ಸಾರ್ವಜನಿಕರಿಗೆ ವಂಚನೆ ಮಾಡಲಿ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.‌

ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘವಾದ ಪೋಸ್ಟ್ ಮಾಡಿರುವ ಅವರು, ಪಿಎಫ್ ಹಣ ವಂಚನೆ ಆರೋಪ ಎದುರಿಸುತ್ತಿರುವ ಕಂಪನಿಯಲ್ಲಿ ತಮ ಪಾತ್ರದ ಕುರಿತು ವಿವರಣೆ ನೀಡಿದ್ದಾರೆ. ಅಲ್ಲದೆ ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ನನ್ನ ವಿರುದ್ಧದ ಪಿಎಫ್ ಪ್ರಕರಣದ ಆರೋಪ ಕೇಳಿ ಬಂದಿರುವುದರಿಂದ ನಾನು ಸ್ಪಷ್ಟಿಕರಣ ನೀಡಲು ಬಯಸುತ್ತೆನೆ ಎಂದು ಪತ್ರವನ್ನು ಆರಂಭಿಸಿರುವ ಅವರು, ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈ.ಲಿ., , ಸೆಂಟಾರಸ್ ಲೈಫ್‌ಸ್ಟೈಲ್ ಬ್ರಾಂಡ್ ಪ್ರೈ. ಲಿ., ಬೆರ್ರಿಜ್ ಫ್ಯಾಶನ್ ಹೌಸ್ ಕಂಪನಿಯಲ್ಲಿ ೨೦೧೮-೧೯ರಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಈ ಸಂಸ್ಥೆಗಳ ಜೊತೆ ಸಾಲದ ರೂಪದಲ್ಲಿ ಅವರ ಹಣಕಾಸಿನ ಕೊಡುಗೆಗಳನ್ನು ಮಾತ್ರ ಆಧರಿಸಿದೆ ಎಂದು ಹೇಳಿದ್ದಾರೆ.

೨೦೪೮-೧೯ರಲ್ಲಿ ನಾನು ಈ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸಿನ ಕೊಡುಗೆ ನೀಡಿದ್ದರಿಂದ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಆದರೆ ಈ ಕಂಪನಿಯಲ್ಲಿ ನಾನು ಸಕ್ರಿಯ ಕಾರ್ಯ ನಿರ್ವಾಹಕನಾಗಿ ಕೆಲಸ ಮಾಡಿಲ್ಲ ಅಥವಾ ಕಂಪನಿಯ ವ್ಯವಹಾರಗಳಲ್ಲಿ ನಾನು ಭಾಗಿಯಾಗಿಲ್ಲ. ಕ್ರಿಕೆಟಿಗನಾಗಿ, ಟಿವಿ ನಿರೂಪಕನಾಗಿ ನಾನು ಕೆಲಸ ಮಾಡುತ್ತಿರುವ ಕಾರಣ ಆ ಕಂಪನಿಯ ವ್ಯವಹಾರದಲ್ಲಿ ಪಾಲ್ಗೊಳ್ಳಲು ನನಗೆ ಸಮಯವೇ ಇರಲಿಲ್ಲ. ನಾನು ಸಾಲ ನೀಡಿದ ಯಾವುದೇ ಕಂಪನಿಗಳಲ್ಲಿ ಕಾರ್ಯ ನಿರ್ವಾಹಕ ಪಾತ್ರವನ್ನು ವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣ ಹಿನ್ನೆಲೆ
ಭವಿಷ್ಯ ನಿಧಿ (ಪಿಎಫ್) ಪ್ರಾದೇಶಿಕ ಆಯುಕ್ತ ಷಡಕ್ಷರಿ ಗೋಪಾಲ್ ರೆಡ್ಡಿ ಹೊರಡಿಸಿರುವ ಬಂಧನ ವಾರೆಂಟ್ ವಿವಾದಕ್ಕೆ ಕಾರಣವಾಗಿದೆ. ರಾಬಿನ್ ಉತ್ತಪ್ಪ ಅವರಿಗೆ ಸಂಬಂಧಿಸಿದ ಖಾಸಗಿ ಸಂಸ್ಥೆ ಸೆಂಟಾರಸ್? ಲೈಫ್‌ಸ್ಟೈಲ್ ಬ್ರಾಂಡ್?? ಪ್ರೈವೇಟ್ ಲಿಮಿಟೆಡ್ ತನ್ನ ನೌಕರರ ಸಂಬಳದಿಂದ ಪಿಎಫ್ ಕೊಡುಗೆ ಕಡಿಮೆ ಮಾಡಿದ್ದು, ಅವರುಗಳನ್ನು ಠೇವಣಿ ಮಾಡುವಲ್ಲಿ ವಿಫಲವಾಗಿದ್ದರಿಂದ ೨೩-೨೪ ಲಕ್ಷ ರೂಪಾಯಿ ವಂಚನೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

Tags: