Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಕ್ರಿಸ್‌ಮಸ್‌ ಆಚರಣೆ: ಕೈಸ್ತ ಬಾಂಧವರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ ಆಚರಣೆ ಜೋರಾಗಿದ್ದು, ಕ್ರೈಸ್ತ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಸ್‌ಮಸ್‌ ಶುಭಾಶಯವನ್ನು ಕೋರಿದ್ದಾರೆ.

ಭಾರತದಾದ್ಯಂತ ಕ್ರೈಸ್ತ ಬಾಂಧವರು ಇಂದು(ಡಿಸೆಂಬರ್‌.25) ಕ್ರಿಸ್‌ಮಸ್‌ ಸಂಭ್ರಮದಲ್ಲಿ ಭಾಗಿಯಾಗಿದ್ದು, ತಂಡೋಪತಂಡವಾಗಿ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ ಹಬ್ಬದ ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ತಮ್ಮ ಎಕ್ಸ್‌ ಖಾತೆಯ ಮೂಲಕ ಶುಭಾಶಯ ಕೋರಿರುವ ಮೋದೊ ಅವರು, ಭಗವಾನ್‌ ಜೀಸಸ್‌ ಅವರು ಹಾಕಿಕೊಟ್‌ ಮಾರ್ಗಗಳಲ್ಲಿ ನಾವು ಸಾಗಬೇಕಿದೆ. ಆ ಮುಖಾಂತರ ಶಾಂತಿ, ಸಹಬಾಳ್ವೆ ಹಾಗೂ ಸಮೃದ್ಧಿಯನ್ನು ಸಾಧಿಸಬೇಕಿದೆ ಎಂದು ಹೇಳಿದ್ದಾರೆ.

ಇನ್ನು ನವದೆಹಲಿಯಲ್ಲಿರುವ ಕ್ಯಾಥೋಲಿಕ್‌ ಬಿಷಪ್ಸ್‌ ಕಾನ್ಫ್ರೆನ್ಸ್‌ ಆಫ್‌ ಇಂಡಿಯಾದ ವತಿಯಿಂದ ಮಂಗಳವಾರ(ಡಿ.24) ಆಯೋಜಿಸಿದ್ದ ಕ್ರಿಸ್‌ಮಸ್‌ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯೇಸು ಅವರ ಆಶಯಯದಂತೆ, ಸಹೋದರತೆ, ಸಮಾನತೆ, ಪ್ರೀತಿ ಹಾಗೂ ಭ್ರಾತೃತ್ವದಿಂದ ನಾವು ಬಾಳಬೇಕು ಎಂದು ತಿಳಿಸಿದ್ದಾರೆ.

Tags:
error: Content is protected !!