Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬಹುಭಾಷಾ ಸಂಸ್ಕೃತಿ ನೀತಿ ಪಾಲಿಸಿ: ಗೊ.ರು.ಚನ್ನಬಸಪ್ಪ

ಬಿ. ಟಿ. ಮೋಹನ್‌ಕುಮಾರ್
ಮಂಡ್ಯ (ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ): ಬಹುಭಾಷಾ ಸಂಸ್ಕೃತಿ ನೀತಿಯನ್ನು ಸಂವಿಧಾನಾ ತ್ಮಕವಾಗಿ ಕೇಂದ್ರ ಸರ್ಕಾರ ಪಾಲಿಸಬೇಕು ಎಂದು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಗೊ. ರು. ಚನ್ನಬಸಪ್ಪ ಚಾಟಿ ಬೀಸಿದರು.

ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಮತ್ತು ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ಶುಕ್ರವಾರದಿಂದ ಆರಂಭವಾದ ೮೭ನೇ ಕನ್ನಡ ಸಾಹಿತ್ಯ ಸಮ್ಮೇ ಳನದ ಸರ್ವಾಧ್ಯಕ್ಷರ ನುಡಿಗಳ ನ್ನಾಡಿದ ಅವರು, ‘ಬಹುತ್ವ’ವು ನಮ್ಮ ದೇಶದ ಏಕತೆಯ ಮೂಲ ದ್ರವ್ಯವಾ ಗಿದೆ. ಅತ್ಯಂತ ಆತಂಕದ ಸಂಗತಿ ಯೆಂದರೆ ಇಂದು ನಮ್ಮ ಸಾಮಾಜಿಕ ಬಹುತ್ವಕ್ಕೆ, ಬಹು ಸಂಸ್ಕೃತಿಗೆ, ಭಾಷಾ ಸ್ವಾಯತ್ತತೆಗೆ, ಧಾರ್ಮಿಕ ಸೌಹಾರ್ದತೆಗೆ, ಆರ್ಥಿಕ ಸಮೃದ್ಧತೆಗೆ ಒದಗಿರುವ ಅಪಾಯ ಎಂದರು.

ನಮ್ಮದು ಸಾಂವಿಧಾನಿಕ ಒಕ್ಕೂಟ ವ್ಯವಸ್ಥೆ- ಫೆಡರಲ್ ವ್ಯವಸ್ಥೆ. ಕಳೆದ ೭೪ ವರ್ಷಗಳಿಂದ ಅನೇಕ ಇತಿಮಿತಿಗಳ ನಡುವೆ ಮುಕ್ಕಾಗದಂತೆ ಅದನ್ನು ಕಾಯ್ದುಕೊಂಡು ಬಂದಿದ್ದೇವೆ. ಕವಿ ರಾಜಮಾರ್ಗಕಾರ ಹೇಳಿದಂತೆ ‘ಕನ್ನಡದೊಳ್ ಭಾವಿಸಿದ ಜನಪದ’ ವಸುಧೆಯಲ್ಲಿ ವಿಲೀನವಾ ಗಿದೆ ನಿಜ. ಆದರೆ ಅದು ತನ್ನ ಭಾಷೆ, ಸಾಹಿತ್ಯ, ಜೀವನ ಪದ್ಧತಿ, ಆಹಾರ ಸಂಸ್ಕೃತಿ, ಅಧ್ಯಾತ್ಮ, ಆರ್ಥಿಕತೆ, ಉದ್ಯೋಗ, ಕಾಯಕ ಮುಂತಾದವು ಗಳ ನೆಲೆಯಿಂದ ತನ್ನ ‘ಅಸ್ಮಿತೆ’ಯನ್ನು, ‘ವಿಶಿ ಷ್ಟತೆ’ಯನ್ನು, ‘ಅನನ್ಯತೆ’ಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದೆ.

ಭಾರತದ ಐಕ್ಯತೆ ಮತ್ತು ಸಮಗ್ರತೆ ನಿಂತಿರುವುದೇ ಬಹುಭಾಷೆ – ಬಹುಸಂಸ್ಕೃತಿಯಿಂದ ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು. ಅಖಿಲ ಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಬ್ಯಾಂಕು ವ್ಯವಹಾರಗಳಲ್ಲಿ, ಅಂಚೆ ಕಚೇರಿಗಳಲ್ಲಿ ರಾಜ್ಯ ಭಾಷೆಗಳನ್ನು ನಿರ್ಲಕ್ಷಿಸಿ ಹಿಂದಿಯನ್ನು ಹೇರುವ ಪ್ರಯತ್ನ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಕನ್ನಡವು ಕರ್ನಾಟಕದಲ್ಲಿ ಸಾರ್ವಭೌಮ ಎಂದರೆ, ಅದು ಭಾಷಾಂಧತೆಯಲ್ಲ. ಅದು ಒಂದು ಆದರ್ಶ ಜನತಂತ್ರದ ಬಹುಮುಖ್ಯ ಗುಣ ಎಂದರು. ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀನಾಯವಾಗಿದೆ.

ಮಕ್ಕಳಿಗೆ ಮತ್ತು ಪೋಷಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದಂತೆ ಪೋಷಕರನ್ನು ಪ್ರೇರೇಪಿಸುತ್ತಿದೆ. ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಎಂಬ ಗುಚ್ಛ ವ್ಯವಸ್ಥೆಯನ್ನು ಪ್ರತೀ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತಿಯೊಂದು

ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ತೆರೆಯಬೇಕು ಎಂದು ಆಗ್ರಹಿಸಿದರು. ನಮ್ಮ ಕನ್ನಡ ಭಾಷೆಯು ಸಮೃದ್ಧವಾಗಿ ಮತ್ತು ಶ್ರೀಮಂತವಾಗಿ ಬೆಳೆಯುತ್ತಿದೆ. ಇಂದು ಕನ್ನಡವು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ, ಛಂದಸ್ಸು ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ವಿಜ್ಞಾನ, ಸಮಾಜಶಾಸ್ತ್ರ, ಕಾನೂನು, ವೈದ್ಯಕೀಯ, ಕೃಷಿ, ಮಹಿಳಾ ಅಧ್ಯಯನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿಯೂ ಕನ್ನಡ ಬೆಳೆಯುತ್ತಿದೆ ಎಂದು ಗೊ. ರು. ಚನ್ನಬಸಪ್ಪ ಹೇಳಿದರು.

ಧರ್ಮದ ದುರುಪಯೋಗ: ಧರ್ಮ, ಧಾರ್ಮಿಕ ಸಂಸ್ಥೆಗಳ ದುರುಪಯೋಗವಾಗು ತ್ತಿದೆ. ಇಂದು ನೈತಿಕತೆಯನ್ನು ಕಳೆದುಕೊಳ್ಳುತ್ತಿ ದ್ದೇವೆ. ಹಬ್ಬ-ಹರಿದಿನಗಳು, ಉತ್ಸವ- ಆರಾಧನೆ ಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಕೆಲಸಕ್ಕೆ ಬದಲಾಗಿ ಸಮಾಜವನ್ನು ಒಡೆಯುವ ಆಯುಧಗಳಾಗುತ್ತಿವೆ. ಗುಡಿಗಳು, ಮಸೀದಿಗಳು, ಗುರುದ್ವಾರ ಗಳು, ಚೈತ್ಯಾಲಯಗಳು, ಬಸದಿಗಳು ಮತೀಯ ಸಂಘರ್ಷದ ಕೇಂದ್ರಗಳಾಗುತ್ತಿರುವುದು ಖೇದನೀಯ, ನಾವು ಕಟ್ಟುವವರಾಗಬೇಕೇ ವಿನಾ ಕೆಡವುವವರಾಗಬಾರದು. ನಾವು ಮುಂದೆ ಹೋಗ ಬೇಕೇ ವಿನಾ ಹಿಂದೆ ಹೋಗಬಾರದು ಎಂದರು.

ತಂತ್ರಜ್ಞಾನದ ನೆರವಿನ ಮೇಲೆ ಭಾಷೆಯ ಬೆಳವಣಿಗೆ
ಸಹಸ್ರಾರು ವರ್ಷಗಳ ಪಯಣದಲ್ಲಿ ಕನ್ನಡ ಭಾಷೆ ಮುಕ್ಕಾಗದೆ ಉಳಿದಿರುವುದಕ್ಕೆ ಕಾರಣ ಅದು ಕಾಲದ ಬೆಳವಣಿಗೆಗಳ ಜೊತೆ ಹೆಜ್ಜೆ ಹಾಕಿ ಮಹಾಮಾರ್ಗದಲ್ಲಿ ಪಯಣಿಸಿರುವುದು. ಈಗ ಜಾಗತಿಕ ಸಂವಹನದ ಚಹರೆಯನ್ನು ಬದಲಾಯಿಸುತ್ತಿರುವ ತಂತ್ರಜ್ಞಾನದ ನೆರವು ಪಡೆದು ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಿ ಆ ಮೂಲಕ ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರ ಆಗಬೇಕಿದೆ ಎಂದು ಗೊರುಚ ಹೇಳಿದರು.

ಮಹಿಳಾ ಸ್ವಾಯತ್ತತೆ
ಮಹಿಳಾ ಸಮಾನತೆ – ಲಿಂಗ ಸಮಾನತೆ ಎನ್ನು ವುದು ಒಂದು ಔಪಚಾರಿಕವಾದ ಕ್ಲೀಷೆಯಾದ ಸಂಗತಿಯಾಗಿ ಬಿಟ್ಟಿದೆ ಎಂದು ಗೊರುಚ ಹೇಳಿದರು. ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ೧೯೮೬ರ ಸರೋಜಿನಿ ಮಹಿಷಿ ಸಮಿತಿ ತನ್ನ ವರದಿಯಲ್ಲಿ ಕನ್ನಡಿಗರಿಗೆ ಉದ್ಯೋಗ ವನ್ನು ಮೀಸಲಿಡುವ ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ ಆ ವರದಿ ಇನ್ನೂ ಅನುಷ್ಠಾನ ಗೊಂಡಿಲ್ಲ. ಇದು ಅನುಷ್ಠಾನಗೊಳ್ಳಬೇಕು ಎಂದರು.

ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶೇಷ ಗಮನ ಬೇಕು
ಕನ್ನಡ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಹೀನಾಯ ನೆಲೆಗೆ ಬಂದು, ವಿಶ್ವವಿದ್ಯಾನಿಲಯದ ಸಿಬ್ಬಂದಿಗೆ ವೇತನ ಕೊಡಲೂ ಆಗುತ್ತಿಲ್ಲ, ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟಲೂ ಆಗುತ್ತಿಲ್ಲ ಎಂಬುದು ನಿಜಕ್ಕೂ ಕಂಗೆಡಿಸುವಂಥದ್ದು. ಯಾವುದೇ ಸರ್ಕಾರಕ್ಕೆ ಇದು ಶೋಭೆ ತರುವುದಿಲ್ಲ ಎಂದು ಗೊರುಚ ಹೇಳಿದರು.

ಕನ್ನಡ ಶಾಸ್ತ್ರೀಯ ಭಾಷೆ
ಬಹುದಿನಗಳ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಮನ್ನಣೆ ೨೦೦೮ರಲ್ಲಿ ದೊರೆಯಿತು. ಒಂದು ಸ್ವಾಯತ್ತ ಕೇಂದ್ರವನ್ನಾಗಿ ಮಾಡಿ ಶಾಸ್ತ್ರೀಯ ಭಾಷೆಗಳಿಗೆ ಒಕ್ಕೂಟ ಸರ್ಕಾರವು ನೀಡುವ ಎಲ್ಲ ಸವಲತ್ತು, ಅನುದಾನ, ನೆರವುಗಳನ್ನು ಕೇಂದ್ರವು ಒದಗಿಸುವಲ್ಲಿ ಅಥವಾ ಅಂತಹ ನೆರವನ್ನು ಪಡೆದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿಲ್ಲ ಎಂದು ಗೊರುಚ ವಿಷಾದ ವ್ಯಕ್ತಪಡಿದರು.

 

Tags: