Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮುಂಬೈ | ಮಗುಚಿ ಬಿದ್ದ ಹಡಗು; ಇಬ್ಬರು ಸಾವು, ಹಲವರು ನಾಪತ್ತೆ

ಮುಂಬೈ: ಮುಂಬೈ ಕರಾವಳಿಯಲ್ಲಿರುವ ಪ್ರಸಿದ್ಧ ಎಲಿಫೆಂಟಾ ಗುಹೆಗಳನ್ನು ನೋಡಲು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರು ಹಡಗು ಸಮುದ್ರದಲ್ಲಿ ಮಗುಚಿ ಬಿದ್ದಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಹಡಗುನಲ್ಲಿದ್ದ ಕೆಲವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನೀಲಕಮಲ್‌ ಹೆಸರಿನ ದೋಣಿ ಗೇಟ್‌ವೇ ಆಫ್‌ ಇಂಡಿಯಾದಿಂದ ಮುಂಬೈ ಕರಾವಳಿಯ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಆಗ ಸ್ವೀಡ್‌ ಬೋಡ್‌ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಫಾತದ ಬಳಿಕ ದೋಣಿಯು ನೀರಿನಲ್ಲಿ ಮುಳುಗುತ್ತಾ ಮಗುಚಿಕೊಳ್ಳಲು ಶುರುವಾಗಿದೆ. ದೋಣಿಯಲ್ಲಿದ್ದ ಬಹುತೇಕರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಹನ್ನೆರಡು ಮಂದಿಗಾಗಿ ನೌಕಾಪಡೆ ಮತ್ತು ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇನ್ನೂ ಘಟನಾ ಸ್ಥಳಕ್ಕೆ ನಾಲ್ಕು ಹೆಲಿಕಾಪ್ಟಾರ್‌ಗಳೂ ಕಾರ್ಯಾಚರಣೆ ಕೈಗೊಂಡಿವೆ. ಜವಾಹರಲಾಲ್‌ ಬೆಹರು ಬಂದರು ಪ್ರಾಧಿಕಾರ ಪೊಲೀಸ್‌ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಮುಂಬೈ ಹಾರ್ಬರ್‌ನಿಂದ ಎಲಿಫೆಂಟಾ ನಡುಗಡ್ಡೆಗಳು 10ಕಿ.ಮೀ ದೂರದಲ್ಲಿವೆ. ಶಿವ, ಪಾರ್ವತಿಯ ಗುಹಾಂತರ ದೇವಾಲಯಗಳಿವೆ.

 

Tags: