Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ರೈತರಿಗಾಗಿ ಏನೂ ಮಾಡಿಲ್ಲ : ಪ್ರಧಾನಿ ನರೇಂದ್ರ ಮೋದಿ

ರಾಜಸ್ತಾನ: ರೈತರಿಗಾಗಿ ಕಾಂಗ್ರೆಸ್‌ ಏನು ಮಾಡಿಲ್ಲದಿದ್ದರು ಅವರ ಹೆಸರಿನಲ್ಲಿ ದೊಡ್ಡದಾಗಿ ಮಾತನಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ರಾಜಸ್ಥಾನದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಒಂದು ವರ್ಷ ಯಶಸ್ವಿಯಾಗಿ ಆಡಳಿತ ಪೂರೈಸಿದ ಕಾರಣ ʼಒಂದು ವರ್ಷ, ಪರಿಣಾಮ ಉತ್ಕರ್ಷʼ ಕಾರ್ಯಕ್ರಮ ಉದ್ಘಾಟಿಸಿ, ಪ್ರಧಾನಿ ಮೋದಿ ಅವರು ಮಾತನಾಡಿದರು. ಇದೇ ವೇಳೆ 46,330 ಕೋಟಿ ರೂ. ಮೌಲ್ಯದ ಇಂಧನ, ರಸ್ತೆ, ರೈಲು, ಮತ್ತು ನೀರು ಇನ್ನಿತರ ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.

ರೈತರಿಗಾಗಿ ಕಾಂಗ್ರೆಸ್‌ ಏನು ಮಾಡುವುದಿಲ್ಲ, ಇತರರಿಗೂ ಮಾಡಲು ಬಿಡುವುದಿಲ್ಲ” ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರನ್ನು ನಿರ್ಲಕ್ಷಿಸುತ್ತದೆ. ಪೂರ್ವ ರಾಜಸ್ಥಾನ ಕಾಲುವೆ ಯೋಜನೆ ಬಹಳ ವಿಳಂಬವಾಗಲು ಕಾಂಗ್ರೆಸ್‌ ಕಾರಣ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಸಹಕಾರದಲ್ಲಿ ನಂಬಿಕೆ ಇಟ್ಟಿದೆ ವಿನಃ ಸಂಘರ್ಷದಲ್ಲಲ್ಲ. ನಾವು ಸಮಸ್ಯೆಯನ್ನು ಸರಿಮಾಡುತ್ತೇವೆ ಹೊರತು ಹುಟ್ಟುಹಾಕುವುದಿಲ್ಲ. ಆದ್ದರಿಂದ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಗೆ ಅನುಮೋದನೆ ನೀಡುವ ಮೂಲಕ ಯೋಜನೆಯನ್ನು ವಿಸ್ತರಿಸಿದ್ದೇವೆ ಎಂದರು.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣವೇ ಪಾರ್ವತಿ-ಕಲಿಸಿಂಧ್-ಚಂಬಲ್‌ ಯೋಜನೆ ಒಪ್ಪಂದಕ್ಕೆ ತರಲಾಯಿತು ಎಂದು ಹೇಳಿದರು.

ಕಾಂಗ್ರೆಸ್‌ ನೀರಿನ ಸಮಸ್ಯೆಗೆ ಎಂದಿಗೂ ಸ್ಪಂದಿಸುವುದಿಲ್ಲ. ನಮ್ಮ ನೀರು ಗಡಿ ದಾಟಿ ಹರಿಯುತ್ತಿದ್ದರು ಪರಿಹಾರ ಕಂಡುಕೊಳ್ಳದ ಕಾಂಗ್ರೆಸ್‌ ಎರಡು ರಾಜ್ಯಗಳ ನಡುವಿನ ನೀರಿನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದು ಹೇಳಿದರು.

Tags:
error: Content is protected !!