Mysore
29
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ವಿಜಯೇಂದ್ರ ವಿರುದ್ಧ 150 ಕೋಟಿ ಆಮಿಷ ಆರೋಪ: ವಿಪಕ್ಷ ನಾಯಕ ಆರ್.ಅಶೋಕ್‌ ಪ್ರತಿಕ್ರಿಯೆ

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ 150 ಕೋಟಿ ಆಮಿಷ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್‌ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು 150 ಕೋಟಿ ರೂ ಯಾಕೆ ಕೊಡಬೇಕು. ವಿಷಯ ಡೈವರ್ಟ್‌ ಮಾಡಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ. ಕಾಂಗ್ರೆಸ್‌ನವರೇ ಆಮಿಷ ಒಡ್ಡಿದರು ಎಂದು ಮಾಣಿಪ್ಪಾಡಿ ಹೇಳಿದ್ದಾರೆ. ಆದರೆ ಸದನ ಡೈವರ್ಟ್‌ ಮಾಡಲು ಕಾಂಗ್ರೆಸ್‌ ನಾಯಕರು ಪ್ಲಾನ್‌ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಈಗಾಗಲೇ ಅಧಿವೇಶನದಲ್ಲಿ ವಕ್ಫ್‌ ವಿಚಾರದ ಬಗ್ಗ ಚರ್ಚೆ ನಡೆಸಿದ್ದೇವೆ. ಇಂದು ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಆಗ್ರಹಿಸುತ್ತೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಹಗರಣದಲ್ಲಿ ಸಿಲುಕಿದ್ದಾರೆ. ಸರ್ಕಾರಕ್ಕೆ ಪಲಾಯನ ಮಾಡು ಆತುರ ಬಂದಿದೆ. ಉತ್ತರ ಕರ್ನಾಟಕದ ಚರ್ಚೆಗೆ ಸರ್ಕಾರ ಅವಕಾಶ ಮಾಡಿಕೊಡಲು ಸಿದ್ಧವಿಲ್ಲ. ಕಾಂಗ್ರೆಸ್‌ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ಚರ್ಚೆ ಮಾಡಿದರೆ ಎಲ್ಲಾ ಹೊರಗೆ ಬರುತ್ತೆ ಎನ್ನುವ ಭಯ ಅವರಲ್ಲಿದೆ ಎಂದು ಕಿಡಿಕಾರಿದರು.

 

 

Tags:
error: Content is protected !!