ಮೈಸೂರಿನಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರು ಉಪಯೋಗಿಸಲು ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ದಿವಂಗತ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ಹೆಸರನ್ನು ವರ್ತುಲ ರಸ್ತೆಗೆ ನಾಮಕರಣ ಮಾಡಲು ೨೦೧೧ರಲ್ಲೇ ಮೈಸೂರು ಮಹಾನಗರ ಪಾಲಿಕೆ ನಿರ್ಣಯ ಮಾಡಿದ್ದರೂ ಇದುವರೆವಿಗೆ ಅನುಷ್ಠಾನ ಆಗದಿರುವುದು ದುರಂತವೇ ಸರಿ. ದೂರದೃಷ್ಟಿ ವ್ಯಕ್ತಿತ್ವ ಹೊಂದಿದ್ದ ಎಸ್. ಎಂ. ಕೃಷ್ಣ ಅವರು ಮೈಸೂರಿನ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಉಳ್ಳವರಾಗಿದ್ದರು ಎಂಬುದಕ್ಕೆ ವರ್ತುಲ ರಸ್ತೆ ನಿರ್ಮಾಣಕ್ಕೆ ೨೦೦೩ರಲ್ಲೇ ಚಾಲನೆ ನೀಡಿ, ಅಗತ್ಯ ಅನುದಾನದ ಜೊತೆಗೆ ಎಲ್ಲಾ ರೀತಿಯ ನೆರವು ನೀಡಿರುವುದೇ ಸಾಕ್ಷಿಯಾಗಿದೆ. ಮೈಸೂರು ಮಹಾ ನಗರಪಾಲಿಕೆ ನಿರ್ಣಯ ಕೈಗೊಂಡಿರುವಂತೆ ಎಸ್. ಎಂ. ಕೃಷ್ಣ ಅವರ ಹೆಸರನ್ನು ಈಗಲಾದರೂ ಅಂತಿಮಗೊಳಿಸುವುದು ಸೂಕ್ತ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.