Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪೋರ್ಬ್ಸ್‌ 2024 | ವಿಶ್ವದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ನಾರಿಯರು

ಹೊಸದಿಲ್ಲಿ: ಪೋರ್ಬ್ಸ್‌ ರಾಷ್ಟ್ರೀಯ ವ್ಯಾಪಾರ ನಿಯತಕಾಲಿಕೆಯ ಅತ್ಯಂತ ಪ್ರಬಲ ಸಂಸ್ಥೆಯಾಗಿದೆ. ಪೋರ್ಬ್ಸ್‌ ಈ ವರ್ಷದ (2024) ಅತ್ಯಂತ ಪ್ರಭಾವಶಾಲಿ 100 ಮಂದಿ ಮಹಿಳೆಯರ ಪಟ್ಟಿ ಬಿಡುಗಡೆ. ಅದರಲ್ಲಿ ಭಾರತದ ಮೂವರು ಮಹಿಳೆಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿಶ್ವದಲ್ಲೇ 28 ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರ ಎಚ್‌ಸಿಎಲ್‌ ಕಾರ್ಪೋರೇಷನ್‌ ಸಿಇಒ ರೋಷನಿ ನಾದರ್‌ ಮಲ್ಹೋತ್ರಾ ಹಾಗೂ ಬಯೋಕಾನ್‌ ಸಂಸ್ಥಾಪಕಿ ಕರಣ್‌ ಮಜುಂದರ್‌ ಷಾ ಈ ಪಟ್ಟಿಯಲ್ಲಿ ಇದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಪೋರ್ಬ್ಸ್‌ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದ್ದಾರೆ. ಹೋದ ವರ್ಷದಲ್ಲಿ 32ನೇ ಶ್ರೆಯಾಂಕ ಪಡೆದಿದ್ದರು. 2024 ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಪ್ರಸ್ತುತ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್‌ ಭಾರತದ 4 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ರೋಶನಿ ನಾದರ್‌ ಮಲ್ಹೋತ್ರಾ ಅವರು, ಈ ಪಟ್ಟಿಯಲ್ಲಿ 81 ನೇ ಶ್ರೇಯಾಂಕದಲ್ಲಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ. ಎಚ್‌ಸಿಎಲ್‌ ಸಂಸ್ಥಾಪಕ ಮತ್ತು ಕೈಗಾರಿಕೋದ್ಯಮಿ ಶಿವ ನಾಡರ್‌ ಅವರ ಪುತ್ರಿಯಾಗಿದ್ದು, ಪ್ರಸ್ತುತ ಈ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಹಾಗೆಯೇ ಮಲ್ಹೋತ್ರಾ ಅವರು ಶಿವ ನಾಡರ್‌ ಫೌಂಡೇಶನ್‌ನ ಟ್ರಸ್ಟಿಯಾಗಿದ್ದಾರೆ.

ಪೋರ್ಬ್ಸ್‌ನ ಪವರ್‌ವುಲ್‌ ವುಮೆನ್‌ ಪಟ್ಟಿಯಲ್ಲಿ ಕಿರಣ ಮಜುಂದರ್‌ ಶಾ 82 ನೇ ಸ್ಥಾನ ಪಡೆದಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91ನೇ ಸ್ಥಾನವನ್ನು ಪಡೆದಿರುವ ಇವರು ಜೈವಿಕ ತಂತ್ರಜ್ಞಾನದಲ್ಲಿ ಟ್ರಯಲ್‌ಬ್ಲೇಜರ್‌ ಆಗಿದ್ದಾರೆ. 1978ರಲ್ಲಿ ಬಯೋಫಾರ್ಮಾಸ್ಯುಟಿಕಲ್‌ ಬಯೋಕಾನ್‌ ಸಂಸ್ಥೆ ಸ್ಥಾಪಿಸಿದ್ದಾರೆ. ಇದು ಇನ್ಸುಲಿನ್‌ ತಯಾರಿಸುವ ಸಂಸ್ಥೆಯಾಗಿದೆ.

Tags: