Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕನ್ನಡದಲ್ಲಿ ತೀರ್ಪು ನೀಡಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಕನ್ನಡದಲ್ಲಿ ತೀರ್ಪು ನೀಡಿ ಕರ್ನಾಟಕ ಹೈಕೋರ್ಟ್‌ ಹೊಸ ಇತಿಹಾಸ ಬರೆದಿದೆ.

ಕನ್ನಡ ಆಡಳಿತ ಭಾಷೆಯಷ್ಟೇ ಅಲ್ಲ. ನ್ಯಾಯದಾನದ ಭಾಷೆಯೂ ಕನ್ನಡ ಆಗಬೇಕು ಎನ್ನುವ ಕೂಗಿಗೆ ಸ್ಪಂದಿಸಿದ ಹೈಕೋರ್ಟ್‌ ಇಂದು ಕನ್ನಡದಲ್ಲೇ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಸ್.ದೀಕ್ಷಿತ್‌, ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠವು ನೀಡಿದ ಈ ತೀರ್ಪು ಭಾರತ ಭಾಷಾ ದಿನವನ್ನು ಸ್ಮರಣೀಯವಾಗಿಸಿದೆ.

ಪಟ್ಟನಾಯಕನಹಳ್ಳಿ ಮಠದ ಸ್ವಾಮೀಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಭಾಗೀಯ ಪೀಠ ಕನ್ನಡದಲ್ಲಿ ತೀರ್ಪು ನೀಡಿದೆ.

ತೀರ್ಪಿನ ಆಪರೇಟಿವ್‌ ಭಾಗವನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಕನ್ನಡದಲ್ಲಿಯೇ ಓದಿದ್ದಾರೆ.

ಕನ್ನಡ ಅವಸಾನ ಆಗಬಾರದು ಎಂದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲೇ ವ್ಯವಹಾರ ನಡೆಯಬೇಕು ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಪ್ರತಿಪಾದಿಸಿದ್ದಾರೆ.

Tags:
error: Content is protected !!