Mysore
35
few clouds

Social Media

ಸೋಮವಾರ, 20 ಏಪ್ರಿಲ 2026
Light
Dark

ಮನೆಬಿಟ್ಟು ತೆರಳಿದ್ದ ಯುವತಿಯ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆ

ಮಡಿಕೇರಿ: ಮೊಬೈಲ್‌ ವಿಚಾರವಾಗಿ ಸಹೋದರನೊಂದಿಗೆ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ

ಯುವತಿಯ ಮೃತದೇಹ ಎರಡು ದಿನಗಳ ನಂತರ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

ಕುಶಾಲನಗರದ ಭಾವನಾ ಎಂಬುವವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳಾಗಿದ್ದಾರೆ. 10ನೇ ತರಗತಿ ಮುಗಿಸಿ ಮನೆಯಲ್ಲಿದ್ದ ಭಾವನಾ ಬಿಡುವಿನ ವೇಳೆಯಲ್ಲಿ ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ನೆರವಾಗುತ್ತಿದ್ದಳು. ಇದೇ ಡಿಸೆಂಬರ್.‌8ರಂದು ಮೊಬೈಲ್‌ ವಿಚಾರವಾಗಿ ಭಾವನಾ ಹಾಗೂ ಆಕೆಯ ತಮ್ಮ ಮಹಿಪಾಲ್‌ ನಡುವೆ ಜಗಳವಾಗಿದೆ.

ಈ ವೇಳೆ ನಾಳೆ ಬರುವುದಾಗಿ ತಿಳಿಸಿ ಅಂಗಡಿಯಿಂದ ಹೊರ ನಡೆದ ಭಾವನಾ ಕಾಣೆಯಾಗಿರುವುದಾಗಿ ತಂದೆ ರಣಜಿತ್‌ ಸಿಂಗ್‌ ಕುಶಾಲನಗರ ಪಟ್ಟಣ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

ಈ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದೊಂದಿಗೆ ನದಿಯಲ್ಲಿ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಯುವತಿ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Tags:
error: Content is protected !!