Mysore
21
haze

Social Media

ಬುಧವಾರ, 28 ಜನವರಿ 2026
Light
Dark

ಲೋಕಸಭೆಯಲ್ಲಿ ರೈಲ್ವೆ ತಿದ್ದುಪಡಿ ಮಸೂದೆ ಅಂಗೀಕಾರ: ಅಶ್ವಿನಿ ವೈಷ್ಣವ್‌ ಮಾಹಿತಿ

ನವದೆಹಲಿ: ಲೋಕಸಭೆಯಲ್ಲಿ ರೈಲ್ವೆ ತಿದ್ದುಪಡಿ ಮಸೂದೆ ಅಂಗೀಕರಿಸಿದ್ದು, ಇದು ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು, ಈ ತಿದ್ದುಪಡಿಯು ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತದೆ ಎಂಬ ನಕಲಿ ನಿರೂಪಣೆಯನ್ನು ಹುಟ್ಟುಹಾಕಲಾಗಿದೆ ಎಂದರು.

ಇನ್ನು ಸಂವಿಧಾನದ ಬಗ್ಗೆ ಅವರ ನಕಲಿ ನಿರೂಪಣೆ ವಿಫಲವಾಗಿದೆ. ಈಗ ಇದು ಸಹ ವಿಫಲವಾಗಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಚರ್ಚೆಯ ನಂತರ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

ಇಂಡಿಯನ್‌ ರೈಲ್ವೆ ಬೋರ್ಡ್‌ ಕಾಯ್ದೆ1905ನ್ನು ರೈಲ್ವೆ ಆಕ್ಟ್‌ 1989ಗೆ ಸೇರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಇದು ಭಾರತೀಯ ರೈಲ್ವೆಯ ಕಾನೂನಿನ ಚೌಕಟ್ಟನ್ನು ಸರಳೀಕರಿಸಲಿದೆ ಎಂದು ವೈಷ್ಣವ್‌ ಹೇಳಿದ್ದಾರೆ.

 

Tags:
error: Content is protected !!