Mysore
18
few clouds

Social Media

ಸೋಮವಾರ, 05 ಜನವರಿ 2026
Light
Dark

ಬೆಳಗಾವಿ ಪಂಚಮಸಾಲಿ ಹೋರಾಟ:ಐವರ ವಿರುದ್ಧ ಎಫ್‌ಐಆರ್‌

ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯದವರು ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ವೇಳೆ ಬುಧವಾರ ಕಲ್ಲು ತೊರಾಟದಲ್ಲಿ ಪೊಲೀಸ್‌ ಇಸ್ಟ್‌ಪೆಕ್ಟರ್‌ ಸೇರಿದಂತೆ 17 ಜನರಿಗೆ ಗಾಯವಾಗಿದೆ. ಜೊತೆಗೆ ಸರ್ಕಾರಿ ಬಸ್‌, ಪೊಲೀಸ್‌ ವಾಹನಗಳು ಸಹ ಜಖಂಗೊಂಡ ಹಿನ್ನೆಲೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲು ಎಸೆದ ನಿಂಗಪ್ಪ ಬಣದ್‌, ಉಮೇಶ್‌ ಇಂಗಳೆವಾರ್‌, ರಾಮಗೌಡ ಫಕೀರಗೌಡ, ಮಂಜುನಾಥ್‌ ಬೆಂಡಿಗೇರಿ, ಮಂಜುನಾಥ್‌ ಗುಮ್ಮಗೋಳ ಹಾಗೂ ಇತರರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆರೋಪಿತರು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ್ದಾರೆ. ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಬಿಎನ್‌ಎಸ್‌ ಕಲಂ 115(2), 109(1), 118(2), 352, 351(2) 132,121,223,324,184,189(3), 192(2), 190 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!