Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಯಶಸ್ಸಿಗೆ ಅಡ್ಡದಾರಿ ಅಥವಾ ಸರಳ ದಾರಿಗಳಿಲ್ಲ: ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್

ಮೈಸೂರು: ಕಠಿಣ ಪರಿಶ್ರಮಕ್ಕೆ ತಕ್ಕ ಅವಕಾಶಗಳು ಸಕಾಲದಲ್ಲಿ ಒದಗಿಬಂದರೆ ಯಶಸ್ಸು ಗ್ಯಾರಂಟಿ ಲಭಿಸುತ್ತದೆ. ಯಶಸ್ಸಿಗೆ ಅಡ್ಡದಾರಿ ಅಥವಾ ಸರಳ ದಾರಿಗಳು ಇಲ್ಲ. ಗುರಿ ಮತ್ತು ಕನಸುಗಳ ಬೆನ್ನೇರಿ ಹೊರಡಿ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಷರೀಫ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಮೈಸೂರು ನಗರದ ಜ್ಞಾನಬುತ್ತಿ ಸಂಸ್ಥೆವತಿಯಿಂದ ಆಯೋಜಿಸಿದ್ದ ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರಕ್ಕೆ ಗಿಡಕ್ಕೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿದ ಮಾತನಾಡಿದರು.

ಭಯ ಜಾಗದಲ್ಲಿ ಭರವಸೆಯನ್ನು ಭಿತ್ತಿ, ಯಶಸ್ಸೆಂಬ ಸಮೃದ್ಧ ಫಸಲನ್ನು ಪಡೆಯಿರಿ. ಭಯ ನಮ್ಮನ್ನು ಬಂಧಿಸಿದರೆ; ಭರವಸೆ ನಮ್ಮನ್ನು ಬಂಧಮುಕ್ತಗೊಳಿಸುತ್ತದೆ. ನಂಬಿಕೆಯೇ ಜೀವನ; ಸಂಶಯವೇ ಮರಣ ಎಂಬ ವಿವೇಕಾನಂದರ ಮಿಂಚಿನ ವಾಣಿ ನಿಮ್ಮ ಕಿವಿಯಲ್ಲಿ ಸದಾ ಗುನುಗುತ್ತಿರಲಿ ಎಂದರು.

ಇಂದಿನ ಯುವ ಪೀಳಿಗೆ ನಂಬಿಕೆಯಿಟ್ಟು ಯಾವುದೇ ಕೆಲಸಕ್ಕೆ ಕೈಹಾಕಿದರೂ ಅಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು. ಆದರೆ ಬಹುತೇಕರು ಅಪನಂಬಿಕೆಗೆ ದಾಸರಾಗಿ ಸರ್ವನಾಶದೆಡೆಗೆ ದಾಪುಗಾಲು ಹಾಕುತ್ತಿದ್ದಾರೆ. ಸ್ಪಷ್ಟವಾದ ಮತ್ತು ನಿಖರವಾದ ಗುರಿಯಿಟ್ಟು ಬಿಲ್ಲಿನಿಂದ ಹೊರಟ ಬಾಣ ಎಂದೂ ತನ್ನ ವಿಫಲವಾಗುವುದಿಲ್ಲ. ಆದರೆ ಸಂಶಯವಿಟ್ಟುಕೊಂಡು ಹೊರಟ ಬಾಣ ದಿಕ್ಕಾಪಾಲಾಗಿ ಹೋಗುತ್ತದೆ ಎಂದರು.

ವಿಶ್ರಾಂತ ಕುಲಪತಿ ಪ್ರೊ. ಎ. ಬಾಲಸುಬ್ರಮಣ್ಯಂ ಅವರು ಮಾತನಾಡಿ, ಪ್ರಶ್ನೆಪತ್ರಿಕೆ ರೂಪಿಸುವ ವಿನ್ಯಾಸ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಸಿಲಬಸ್ ಅನ್ನು ಅಮೂಲಾಗ್ರವಾಗಿ ತಿಳಿದುಕೊಳ್ಳಬೇಕು ಜೊತೆಗೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಆಗಾಗ್ಗೆ ತಿರುವು ಹಾಕುತ್ತಿರಬೇಕು ಎಂದರು. ಕಠಿಣ ಪರಿಶ್ರಮವಿಲ್ಲದೆ ಇಂದಿನ ಪರೀಕ್ಷೆಗಳನ್ನು ಪಾಸು ಮಾಡಲು ಕಷ್ಟ ಎಂದರು. ಹುದ್ದೆಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ ಆದರೆ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಿದೆ. ಪ್ರಶ್ನೆಪತ್ರಿಕೆ ತಯಾರಕರು ನಿಮ್ಮನ್ನು ಸ್ಪರ್ಧೆಯಿಂದ ಹೊರಹಾಕುವ ಉದ್ದೇಶವಿಟ್ಟುಕೊಂಡು ಪ್ರಶ್ನೆಪತ್ರಿಕೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ಖ್ಯಾತ ಶಿಕ್ಷಣ ತಜ್ಞರಾದ ಪ್ರೊ.ಎನ್.ಎನ್.ಪ್ರಹ್ಲಾದ್ ಅವರು ಮಾತನಾಡಿ, ಆಸಕ್ತಿ ಮತ್ತು ಕಠಿಣ ಪರಿಶ್ರಮ ಎರಡೂ ಸೇರಿದರೆ ಮಾತ್ರ ಗೆಲುವು ನಿಮ್ಮದಾಗುತ್ತದೆ ಎಂದರು. ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಹೊರಟಿರುವ ನಿಮಗೆ ಶುಭವಾಗಲಿ ಎಂದರು.

ಸಮಾರಂಭದಲ್ಲಿ ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಪದ್ಮನಾಭ್ ಮಾತನಾಡಿ ನಿದ್ರೆ, ತೂಕಡಿಕೆ, ಭಯ, ಕೋಪ ಮತ್ತು ಅಲಸ್ಯಗಳು ವಿದ್ಯಾರ್ಥಿಗಳ ಪರಮಶತ್ರುಗಳು ಹಾಗೆಯೇ ಶಿಸ್ತು, ಸಂಯಮ, ಸಿದ್ಧತೆ, ಉತ್ಸಾಹ, ಚೈತನ್ಯ ಮತ್ತು ಸ್ಪೂರ್ತಿ ಇವು ವಿದ್ಯಾರ್ಥಿಗಳ ಪರಮ ಮಿತ್ರರು ಎಂದರು. ಹಾಗೆಯೇ ಯಾವುದೇ ಸಾಧನೆ ಮಾಡಲು ನಮಗೆ ಮೊದಲು ಆರೋಗ್ಯ, ಆರಾಮ, ಆಶ್ಚರ್ಯ, ಆನಂದ ಮತ್ತು ಆಯಸ್ಸು ಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದ ವೇದಿಕೆಯ ಮೇಲೆ ಶಿಕ್ಷಣ ತಜ್ಞ ಪ್ರೊ. ಮಲ್ಲಿಕಾರ್ಜುನಶಾಸ್ತ್ರಿ, ಪ್ರೊ. ವಿ. ಜಯಪ್ರಕಾಶ್, ಪ್ರೊ. ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ ಉಪಸ್ಥಿತರಿದ್ದರು.

Tags: