ಮೈಸೂರು: ರಮ್ಮನಹಳ್ಳಿಯಲ್ಲಿ ಕುಡಿಯುವ ನೀರು ಘಟಕ ಸ್ಥಾಪಿಸಲು ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ವಿಳಂಬ ಮಾಡಿರುವ ಕಾರಣ ಕೋರ್ಟ್ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆಯ ಪಿಠೋಪಕರಣಗಳನ್ನು ಇಂದು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು 1994ರಲ್ಲಿ ರಮ್ಮನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲು ಅನೇಕ ರ್ವೆ ನಂಬರ್‌ಗಳ ಸುಮಾರು 45 ಎಕರೆ ಜಮೀನುಗಳನ್ನು ಮೈಸೂರು ಮಹಾನಗರ ಪಾಲಿಕೆ ಭೂ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಭೂ ಸ್ವಾಧೀನಪಡಿಸಿಕೊಂಡ ನಂತರ ಒಂದು ಎಕರೆಗೆ 45 ಸಾವಿರದಂತೆ ಪಾಲಿಕೆ ವತಿಯಿಂದ ರೈತರಿಗೆ ಪರಿಹಾರ ನೀಡಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದುವರೆಗೂ ಪಾಲಿಕೆ ಪರಿಹಾರ ಧನ ನೀಡದ ಕಾರಣ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದರು.
ಗ್ರಾಮಸ್ಥರ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ 2021ರಲ್ಲಿ ಸಂತ್ರಸ್ಥರಿಗೆ ಅಧಿಕ ಹಾಗೂ ಸೂಕ್ತ ಪರಿಹಾರ ಕೊಡುವಂತೆ ಆದೇಶ ನೀಡಿತ್ತು. ಆದರೆ ಮೈಸೂರು ಮಹಾನಗರ ಪಾಲಿಕೆಯೂ ಕೋರ್ಟ್‌ನ ಆದೇಶವನ್ನು ವಿಳಂಬ ಮಾಡಿದಲ್ಲದೇ, ಆದೇಶದ ಯಾವ ನಿಯಮವನ್ನು ಪಾಲಿಸಿರಲಿಲ್ಲ. ಹೀಗಾಗಿ ಪಾಲಿಕೆಯ ಮಾಲುಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು.
ಈ ಅದೇಶದ ಅನ್ವಯ ಕೋರ್ಟ್‌ನ ಅಮೀನರು ಮತ್ತು ವಕೀಲರ ಸಮ್ಮುಖದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಪಿಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.