ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಬೆಳಗಿನ ಜಾವ ಒಂದೂವರೆ ಗಂಟೆಯ ವೇಳೆಯಲ್ಲಿ ಕಾಡಾನೆಗಳ ಓಡಾಟ ಕಂಡು ಬಂದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಳ್ಳೇಗಾಲ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆ ವೃತ್ತದ ಬಳಿ ಇಂದು(ಡಿ.6) ಬೆಳಗಿನ ಜಾವ ಸುಮಾರು ಒಂದೂವರೆ ಗಂಟೆಯ ಸಮಯದಲ್ಲಿ ಎರಡು ಕಾಡಾನೆಗಳು ಸಂಚಾರ ಮಾಡಿರುವ ದೃಶ್ಯ ಕಂಡು ಬಂದಿದೆ. ಈ ದೃಶ್ಯವನ್ನು ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಸೆರೆ ಹಿಡಿದಿದೆ.
ಕಾಡಾನೆಗಳು ರಸ್ತೆಯಲ್ಲಿ ಸಂಚಾರಿಸುತ್ತಿರುವಾಗ ಪೆಟ್ರೋಲ್ ಬಂಕ್ ಒಳಗೆ ಬಂದು ಓಡಾಟ ಮಾಡಿ, ಬಳಿಕ ಮತ್ತೆ ರಸ್ತೆಗೆ ತೆರಳಿದ ದೃಶ್ಯ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದೆ. ಇದೇ ವೇಳೆ ರಸ್ತೆಯಲ್ಲಿ ಆನೆ ಬರುವುದನ್ನು ಕಂಡ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಹೆದರಿ ಸ್ಥಳದಿಂದಲೇ ಪರಾರಿಯಾಗಿದ್ದಾರೆ. ಅಲ್ಲದೇ ಈ ವಿಚಾರವನ್ನು ಅರಣ್ಯ
ಇಲಾಖೆಯವರಿಗೆ ತಿಳಿಸಿದ್ದು, ಅರಣ್ಯ ಇಲಾಖೆಯವರು ಇದೀಗ ಕಾಡಾನೆಗಳನ್ನು ಸೆರೆ ಹಿಡಿಯಲು ಹುಡುಕಾಟ ನಡೆಸುತ್ತಿದ್ದಾರೆ.