Mysore
23
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಹಾಸನ ಜನಲ್ಯಾಣ ಸಮಾವೇಶ: ಸಚಿವ ಕೆ.ಎಚ್‌.ಮುನಿಯಪ್ಪ ಕಾರಿಗೆ ರಸ್ತೆ ಮಧ್ಯದಲ್ಲಿ ಅಪಘಾತ

ಹಾಸನ: ಜೆಡಿಎಸ್‌ ಭದ್ರಕೋಟೆ ಹಾಸನದ ಎಸ್‌.ಎಂ.ಕೃಷ್ಣನಗರದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಕಾರಿಗೆ ರಸ್ತೆ ಮಧ್ಯದಲ್ಲಿ ಅಪಘಾತವಾಗಿದೆ.

ಕಾಂಗ್ರೆಸ್‌ ಸರ್ಕಾರದ ವತಿಯಿಂದ ಇಂದು(ಡಿ.5) ಆಯೋಜಿಸಲಾಗಿದ್ದ ಜನಕಲ್ಯಾಣ ಸಮಾವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಚಿವ ಮುನಿಯಪ್ಪ ಹಾಸನಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಅವರ ಕಾರಿಗೆ ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯ ಶಾಂತಿಗ್ರಾಮದ ಟೋಲ್‌ಗೇಟ್‌ ಸಮೀಪದಲ್ಲಿ ಕಾರವೊಂದು ಹಿಂಬದಿಯಿಂದ ಬಂದು ಡಿಕ್ಕಿಯೊಡೆದಿದೆ. ಈ ಅಪಘಾತದಿಂದ ಸದ್ಯ ಎರಡು ಕಾರಿನಲ್ಲಿರುವ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಹಾಸನ ಜಿಲ್ಲೆಯೂ ಜೆಡಿಎಸ್‌ನ  ಭದ್ರಕೋಟೆಯಾಗಿದ್ದು, 25 ವರ್ಷಗಳ ನಂತರ ಸಂಸದ ಸ್ಥಾನದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಬಳಿಕ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ ಬಳಿಕ ಜನಕಲ್ಯಾಣ ಸಮಾವೇಶವನ್ನು ಹಾಸನದಲ್ಲಿ ನಡೆಸಬೇಕೆಂದು ಆಯೋಜನೆ ಮಾಡಿಕೊಂಡಿದ್ದರು. ಈ  ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಲವು ಸಚಿವರು ಹಾಗೂ ಶಾಸಕರು ಸಮಾವೇಶಕ್ಕೆ ಆಗಮಿಸುತ್ತಿದ್ದರು. ಅಂತೆಯೇ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಆಗಮಿಸುವ ವೇಳೆ ರಸ್ತೆ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ.

 

 

Tags:
error: Content is protected !!