Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪುಷ್ಪ-2 ಚಿತ್ರದ ಟಿಕೆಟ್‌ ದರ ಏರಿಕೆಗೆ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಒಪ್ಪಿಗೆ

ನವದೆಹಲಿ: ತೆಲುಗಿನ ಬಹುನಿರೀಕ್ಷಿತ ಹಾಗೂ ಪ್ಯಾನ್‌ ಇಂಡಿಯಾ ಚಿತ್ರವಾಗಿರುವ ಪುಷ್ಪ-2 ದಿ ರೂಲ್‌ ಸಿನಿಮಾ ಟಿಕೆಟ್‌ ದರ ಏರಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅನುಮತಿ ನೀಡಿದ್ದು, ನಟ ಅಲ್ಲು ಅರ್ಜುನ್‌ ಧನ್ಯವಾದ ತಿಳಿಸಿದ್ದಾರೆ.

ತೆಲುಗು ಚಿತ್ರರಂಗದ ಸ್ಟೈಲಿಶ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್‌ ನಟಿಸಿರುವ ಈ ಸಿನಿಮಾಗೆ ಮೂವಿ ಮೇಕರ್ಸ್‌ ಬಂಡವಾಳ ಹೂಡಿದ್ದು, ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಸಿನಿಮಾವನ್ನು ಸುಕುಮಾರ್‌ ನಿರ್ದೇಶನ ಮಾಡಿದ್ದಾರೆ.

ಟಿಕೆಟ್‌ ದರ ಹೆಚ್ಚಿಸಲು ಸಿಎಂ ಒಪ್ಪಿಗೆ ಸೂಚಿಸಿರುವ ಕಾರಣ ನಟ ಅಲ್ಲು ಅರ್ಜುನ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸಿಎಂ ಚಂದ್ರಬಾಬು ನಾಯ್ಡುರಿಗೆ ಧನ್ಯವಾದ ತಿಳಿಸಿದ್ದಾರೆ.

ತೆಲುಗು ಚಿತ್ರರಂಗದ ಬೆಳವಣಿಗೆಗಾಗಿ ತೆಗೆದುಕೊಂಡಿರುವ ಈ ನಿರ್ಧಾರವು, ಸಿನಿಮಾದ ಮೇಲೆ ಇರುವ ನಿಮ್ಮ ಬದ್ದತೆಯನ್ನು ತೋರಿಸುತ್ತದೆ. ಚಲನಚಿತ್ರೋದ್ಯಮವನ್ನು ಸಶಕ್ತಗೊಳಿಸಲು ಹೀಗೆ ನಮಗೆ ಪ್ರೋತ್ಸಾಹ ನೀಡುತ್ತಾ ಇರಿ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ರಿಗೆ ಧನ್ಯವಾದ ತಿಳಿಸಿದ್ದಾರೆ.

Tags: