Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಚಿನ್‌ ತೆಂಡೂಲ್ಕರ್ ವಿಶ್ವದಾಖಲೆ ಹಿಂದಿಕ್ಕಿದ ಜೋ ರೂಟ್

ನ್ಯೂಜಿಲ್ಯಾಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅಜೇಯ 23 ರನ್‌ ಬಾರಿಸುವ ಮೂಲಕ ಇಂಗ್ಲೆಂಡ್‌ ಬ್ಯಾಟರ್‌ ಜೋ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲ್ಯಾಂಡ್‌ ವಿರುದ್ದ ಇಂಗ್ಲೆಂಡ್‌ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕ್ರೈಸ್ಟ್‌ ಚರ್ಚ್‌ನ ಹ್ಯಾಗ್ಲಿ ಮೈದಾನದಲ್ಲಿ ನಡೆದ ಟೆಸ್ಟ್‌ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್‌ 23 ರನ್ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 4ನೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್‌ ಕಲೆಹಾಕಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದು ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ರೆಕಾರ್ಡ್‌ ಸಚಿನ್‌ ಹೆಸಲ್ಲಿರಿನಲ್ಲಿತ್ತು. ಮಾಸ್ಟರ್‌ ಬ್ಲಾಸ್ಟರ್‌ ಒಟ್ಟು 60 ಬಾರಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿ 1625 ರನ್‌ ಕಲೆ ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಈಗ ಜೋ‌ ರೂಟ್ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೋ ರೂಟ್‌ ಒಟ್ಟು 49 ಬಾರಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಬೀಸಿದ್ದು, ಇಲ್ಲಿಯವರೆಗೆ 1630 ರನ್‌ ಕಲೆಹಾಕಿದ್ದಾರೆ. 147 ವರ್ಷಗಳ ಟೆಸ್ಟ್‌ ಕ್ರಿಕೆಟ್ ಇತಿಹಾಸವನ್ನು‌ ರೂಟ್‌ ತಮ್ಮದಾಗಿಸಿಕೊಂಡಿದ್ದಾರೆ.

ಜೋ ರೂಟ್‌ 150 ಟೆಸ್ಟ್‌ ಪಂದ್ಯಗಳನ್ನಾಡಿ 12,777 ರನ್‌ ಕಲೆಹಾಕಿದ್ದಾರೆ. ಸಚಿನ್‌ರ 15,921 ರನ್‌ ಮುರಿದು ಮತ್ತೊಂದು ವಿಶ್ವ ದಾಖಲೆ ನಿರ್ಮಿಸಲು ರೂಟ್‌ಗೆ ಇನ್ನೂ 3144 ರನ್‌ಗಳು ಬೇಕಾಗಿದೆ.

Tags: