Mysore
21
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ವಕ್ಫ್‌ ಮಸೂದೆ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ

ಕೋಲ್ಕತ್ತಾ: ವಕ್ಫ್‌ ಮಸೂದೆ ಜಾತ್ಯಾತೀತ ವಿರೋಧಿಯಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ವಕ್ಫ್‌ ಮಸೂದೆ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಗಳ ಅಭಿಪ್ರಾಯ ಪಡೆದುಕೊಂಡಿಲ್ಲ.

ಈ ಮಸೂದೆಯು ಒಕ್ಕೂಟ ವ್ಯವಸ್ಥೆಯ ವಿರೋಧಿ ಮತ್ತು ಜಾತ್ಯಾತೀತತೆಯ ವಿರೋಧಿಯಾಗಿದೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಕೇಡನ್ನು ಉಂಟುಮಾಡುವ ಉದ್ದೇಶಿತ ಕೃತ್ಯ ಇದಾಗಿದೆ.

ಈ ಮಸೂದೆಯು ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ. ವಕ್ಫ್‌ ಮಸೂದೆ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದಿಲ್ಲ ಎಂದು ಕಿಡಿಕಾರಿದರು.

ಯಾವುದೇ ಧರ್ಮದ ಮೇಲೆ ದಾಳಿ ನಡೆದರೂ ನಾನು ಅದನ್ನು ಮನಃಪೂರ್ವಕವಾಗಿ ಖಂಡಿಸುತ್ತೇನೆ.

ಅಸ್ತಿತ್ವದಲ್ಲಿರುವ ವಕ್ಫ್‌ ಕಾಯ್ದೆಯಡಿ ತಿದ್ದುಪಡಿ ಮಸೂದೆಯ ಮೂಲಕ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕೆ ಮಾಡಿವೆ.

ಇದು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದರು.

Tags: