Mysore
19
broken clouds

Social Media

ಗುರುವಾರ, 26 ಡಿಸೆಂಬರ್ 2024
Light
Dark

ಐಪಿಎಲ್‌-2025ರ ಮೊದಲ ಪಂದ್ಯದಿಂದ ಬ್ಯಾನ್‌ ಆದ ಹಾರ್ದಿಕ್‌ ಪಾಂಡ್ಯ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೀಸನ್‌ 18ರಲ್ಲಿ ಒಟ್ಟು 10 ತಂಡಗಳು ಆಡಲಿದ್ದಾವೆ. ಈ ಬಾರಿಯು ಹಾರ್ದಿಕ್‌ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ ಮ್ಯಾಚ್‌ಗಳಲ್ಲಿ ಕಣಕ್ಕಿಳಿಯಲಿದೆ. ಆದರೆ ನಾಯಕ ಹಾರ್ದಿಕ್‌ ಪಾಂಡ್ಯ ಮೊದಲ ಮ್ಯಾಚ್‌ನ ನಾಯಕತ್ವ ವಹಿಸಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (2 ಬಾರಿ) ಹಾಗೂ ಪಂಜಾಬ್‌ ಕಿಂಗ್ಸ್‌ (1 ಬಾರಿ) ತಂಡದ ವಿರುದ್ಧ ಆಡಿದ ಪಂದ್ಯಗಳಲ್ಲಿ ನಿಗದಿತ ಸಮಯದಲ್ಲಿ 20 ಓವರ್‌ಗಳನ್ನು ಪೂರೈಸದ ಕಾರಣ ನಾಯಕನಿಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯ ನಿಷೇಧಿಸಲಾಗಿದೆ.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡದ ಸೀಸನ್‌ 17ರ ಕೊನೆಯ ಪಂದ್ಯವಾದ್ದರಿಂದ, ಈ ಬಾರಿಯ ಐಪಿಎಲ್‌ ಸೀಸನ್‌.18ರ ಮೊದಲ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಕಣಕ್ಕಿಳಿಯುವ ಆಗಿಲ್ಲ. ಹೀಗಾಗಿ ಜಸ್ಪ್ರೀತ್‌ ಬುಮ್ರಾ ಅಥವಾ ಸೂರ್ಯಕುಮಾರ್‌ ಯಾದವ್‌ ಮೊದಲ ಪಂದ್ಯವನ್ನು ಮುನ್ನಡೆಸಲಿದ್ದಾರೆ.

ಇನ್ನು ಐಪಿಎಲ್‌ ನಿಯಮದ ಪ್ರಕಾರ, ಐಪಿಎಲ್‌ನಲ್ಲಿ ಆಡುವ ಪ್ರತಿ ತಂಡಗಳು 1 ಗಂಟೆ 30 ನಿಮಿಷಗಳಲ್ಲಿ ಒಂದು ಇನ್ನಿಂಗ್ಸ್‌ ಮುಗಿಸಬೇಕು. ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ, ಒಬ್ಬ ಫೀಲ್ಡರ್‌ನನ್ನು ಕಡಿತ ಮಾಡಲಾಗುತ್ತದೆ. ಹಾಗೆಯೇ ತಪ್ಪು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಇದೇ ತಪ್ಪನ್ನು ಎರಡನೇ ಬಾರಿ ಮಾಡಿದರೆ, ನಾಯಕನಿಗೆ 24 ಲಕ್ಷ ರೂ ದಂಡ, ಜೊತೆ ಪ್ಲೇಯಿಂಗ್‌ ಇಲವೆನ್‌ನ 10 ಆಟಗಾರರಿಗೆ ತಲಾ 6 ಲಕ್ಷ ದಂಡ ಅಥವಾ ಪಂದ್ಯದ ಶೇ.25% ದಂಡ ವಿಧಿಸಲಾಗುತ್ತದೆ.

ಇದೇ ತಪ್ಪನ್ನು ಮೂರನೇ ಬಾರಿ ಪುನರಾವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ರೂ. ದಂಡ ಹಾಗೂ ಒಂದು ಪಂದ್ಯ ನಿಷೇಧಕ್ಕೆ ಒಳಗಾಗುತ್ತಾರೆ. ತಂಡದ ಉಳಿದ ಆಟಗಾರರಿಗೆ ತಲಾ 12 ಲಕ್ಷ ರೂ. ದಂಡ ಅಥವಾ ಪಂದ್ಯದ ಶೇ.50ರಷ್ಟು ದಂಡ ಪಾವತಿಸಬೇಕಾಗುತ್ತದೆ.

Tags: