ನವದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಎನ್‌ಡಿಎಂಎಫ್ ಪರಿಹಾರ ಬಿಡುಗಡೆಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯಗಳಿಗೆ ಎನ್‌ಡಿಎಂಎಫ್ ಪರಿಹಾರ ಬಿಡುಗಡೆ ಮಾಡಲಾಗಿದೆ. ಒಟ್ಟು 15 ರಾಜ್ಯಗಳಿಗೆ 1,115 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ 72 ಕೋಟಿ ರೂ ಪರಿಹಾರ ಬಿಡುಗಡೆಯಾಗಿದೆ.
ಇನ್ನುಳಿದಂತೆ ಉತ್ತರಾಖಂಡಕ್ಕೆ 139 ಕೋಟಿ, ಹಿಮಾಚಲ ಪ್ರದೇಶಕ್ಕೆ 139 ಕೋಟಿ, ಮಹಾರಾಷ್ಟ್ರಕ್ಕೆ 100, ಕೇರಳಕ್ಕೆ 72 ಕೋಟಿ, ತಮಿಳುನಾಡಿಗೆ 50 ಕೋಟಿ, ಪಶ್ಚಿಮ ಬಂಗಾಳಕ್ಕೆ 50 ಕೋಟಿ ರೂಪಾಯಿ ರಿಲೀಸ್ ಆಗಿದೆ. ಇದರ ಜೊತೆಗೆ ಎಂಟು ಈಶಾನ್ಯ ರಾಜ್ಯಗಳಿಗೆ 378 ಕೋಟಿ ಬಿಡುಗಡೆ ಮಾಡಲಾಗಿದೆ.