ಹೊಸದಿಲ್ಲಿ: ದೇಶದ ನಾಲ್ಕು ರಾಜ್ಯಗಳಲ್ಲಿ ಖಾಲಿ ಇರುವ ರಾಜ್ಯಸಭೆಯ ಆರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್.20ರಂದು ಮತದಾನವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈ ಕುರಿತು ಇಂದು(ನ.26) ಚುನಾವಣಾ ಆಯೋಗವೂ ರಾಜ್ಯಸಭೆಯ ದಿನಾಂಕವನ್ನು ಪ್ರಕಟಿಸಿದೆ. ಆಂಧ್ರಪ್ರದೇಶದಲ್ಲಿ ಮೂರು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಹರಿಯಾಣದಲ್ಲಿ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಈ ಉಪಚುನಾವಣೆಯು ವೈಎಸ್‌ಆರ್‌ಸಿಪಿ ಸದಸ್ಯರಾದ ವೆಂಕಟರಮಣ ರಾವ್ ಮೋಪಿದೇವಿ, ಬೀಡಾ ಮಸ್ತಾನ್ ರಾವ್ ಯಾದವ್ ಹಾಗೂ ಆರ್.ಕೃಷ್ಣಯ್ಯ ಅವರು ಆಗಸ್ಟ್‌ನಲ್ಲಿ ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲಾಗುತ್ತಿದೆ.