Mysore
27
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

IPL 2025 ಮೆಗಾ ಹರಾಜು: ಇತಿಹಾಸ ನಿರ್ಮಿಸಿದ 13 ವಯಸ್ಸಿನ ವೈಭವ್‌ ಸೂರ್ಯವಂಶಿ

ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್‌ 2025ರ ಮೆಗಾ ಹರಾಜು ನೆನ್ನೆ(ಸೋಮವಾರ) ಮುಕ್ತಾಯಗೊಂಡಿದ್ದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಈ ಬಾರಿಯ ಹರಾಜಿನಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಹಾಗೂ ಬ್ಯಾಟರ್‌ ರಿಷಭ್‌ ಪಂತ್‌ ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ದಾಖಲೆಯ 27 ಕೋಟಿ ಮೊತ್ತಕ್ಕೆ ಲಕ್ನೋ ತಂಡದ ಪಾಲಾದದ್ದು. ಇನ್ನೊಂದು ವಿಶೇಷತೆ ಆದರೆ 13 ವಯಸ್ಸಿನ ಹುಡುಗನೊಬ್ಬನನ್ನು ಪ್ರಾಂಚೈಸಿಗಳು ಖರೀದಿಸಿದ್ದು.  ಹಾಗೆಯೇ ಹಲವಾರು ಟಿ20 ಪರಿಣಿತ ಆಟಗಾರರು ಮಾರಾಟವಾಗದೇ ಇರುವುದು ಅಚ್ಚರಿಯಾಗಿದೆ.

ವೈಭವ್‌ ಸೂರ್ಯವಂಶಿ ಎನ್ನುವ 13 ವಯಸ್ಸಿನ ಕಿರಿಯ ಆಟಗಾರನಿಗೆ ಈ ಬಾರಿಯ ಹರಾಜಿನಲ್ಲಿ ಟೀಂ ಪ್ರಾಂಚೈಸಿಗಳು ತುಂಬಾ ಬಿಡ್‌ಮಾಡಿದರು ಕೊನೆಯಲ್ಲಿ 1.10 ಕೋಟಿಗೆ ರಾಜಸ್ಥಾನ ಪಾಲಾದರು. 30 ಲಕ್ಷ ಮೂಲಬೆಲೆಯಿಂದ ಬಿಡ್‌ ಆರಂಭವಾಯಿತು.

ಬಿಹಾರದ ಸಮಸ್ತಿಪುರ ಜಿಲ್ಲೆಯ ಮೋತಿಪುರ್‌ ಗ್ರಾಮದ ಯುವಕ ವೈಭವ್‌ ಸೂರ್ಯವಂಶಿ. ಈಗ ದೇಶದಾದ್ಯಂತ ಕ್ರಿಕೆಟ್‌ನಲ್ಲಿ ವೈಭವ್‌ ವಯಸ್ಸು 13 ಅಲ್ಲ ಬದಲಿಗೆ 15ವರ್ಷ ಎಂದು ಚರ್ಚೆಯಾಗುತ್ತಿದ್ದು, ಈ ಕುರಿತು ಈತನ ತಂದೆ ಸಂಜಯ್‌ ಸೂರ್ಯವಂಶಿ ಸ್ಷಷ್ಟನೆ ನೀಡಿದ್ದಾರೆ.

ನನ್ನ ಮಗ 8.5 ವರ್ಷ ವಿದ್ದಾಗಲೇ ಬಿಸಿಸಿಐನ ಬೋನ್‌ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಹಾಗೆಯೇ ಇಂಡಿಯಾದ ಪರವಾಗಿ ಅಡರ್‌ 19 ಈಗಾಗಲೇ ಆಡಿದ್ದಾನೆ. ಡೌಟ್‌ ಬಂದರೆ ಇನ್ನೊಮ್ಮೆ ಬೇಕಾದರೆ ವಯಸ್ಸಿನ ಪರೀಕ್ಷೆಯನ್ನು ಎದುರಿಸುತ್ತಾನೆ ಎಂದು ಹೇಳಿದರು.

ಬಿಹಾರದ ಕ್ರಿಕೆಟ್‌ ಅಸೋಷಿಯೇಶನ್‌ ಅಧ್ಯಕ್ಷ ರಾಕೇಶ್‌ ತಿವಾರಿ ಅವರ ಆಶೀರ್ವಾದ ನಮ್ಮ ಮಗನ ಮೇಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಏಕೆಂದರೆ ನಾಗ್ಪುರದಲ್ಲಿ ನಡೆದಿದ್ದ ಪರೀಕ್ಷಾ ಪಂದ್ಯದಲ್ಲಿ ಭಾಗವಹಿಸಿ ನನ್ನ ಮಗ ಓಂದೇ ಓವರ್‌ನಲ್ಲಿ 17 ರನ್‌ ಒಡೆಯುವ ಮೂಲಕ ವಿಕ್ರಂ ರಾಥೋಡ್‌ ಅವರು ನೀಡಿದ್ದ ಪರೀಕ್ಷೆಯನ್ನು ಪಾಸು ಮಾಡಿದ್ದ ಎಂದಿದ್ದಾರೆ.

Tags:
error: Content is protected !!