ಬೆಂಗಳೂರು: ಇವಿಎಂ ಹ್ಯಾಕ್‌ನಿಂದ ಮಹಾರಾಷ್ಟ್ರದಲ್ಲಿ ಸೋಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಭರ್ಜರಿ ಗೆಲುವು ಸಾಧಿಸಿರುವ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಸ್ಟ್ರಾಟಜಿ ಮಾಡುವುದರಲ್ಲಿಯೂ ಫೇಲ್ ಆಗಿದ್ದೇವೆ. ಮಹಾವಿಕಾಸ ಆಘಾಡಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹಳಷ್ಟು ಕಡೆ ಇವಿಎಂ ಮ್ಯಾನಿಪುಲೇಟ್ ಮಾಡಿದ್ದಾರೆ ಎನ್ನುವ ಶಂಕೆಯಿದೆ. ಆದರೆ ಜಾರ್ಖಂಡ್ ಚುನಾವಣೆಯಲ್ಲಿ ಯಾಕೆ ಹಾಗಾಗಲಿಲ್ಲ ಅಂದರೆ ಬಿಜೆಪಿಯವರು ಪ್ಲಾನ್ ಆಫ್ ಆಕ್ಷನ್ ರೀತಿ ಇದನ್ನು ಮಾಡುತ್ತಾರೆ. ನಂಬಿಕೆ ಬರಬೇಕೆಂದು ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ ಎಂದು ಆರೋಪಿಸಿದರು.