Mysore
16
overcast clouds

Social Media

ಗುರುವಾರ, 08 ಜನವರಿ 2026
Light
Dark

ಓದುಗರ ಪತ್ರ| ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಎಚ್. ಡಿ. ಕೋಟೆ ತಾಲ್ಲೂಕಿನ ಕಾರಾಪುರ, ಗುಂಡತ್ತೂರು, ಮಗ್ಗೆ, ಹೊಸಹಳ್ಳಿ ಅಂತರಸಂತೆ, ಲಕ್ಷಿ ಪುರ, ಕೆ. ಜಿ. ಹಳ್ಳಿ ಮಾರ್ಗವಾಗಿ ಎಚ್. ಡಿ. ಕೋಟೆಗೆ ತೆರಳಲು ಬಸ್‌ಗಳ ಸಂಖ್ಯೆ ಕಡಿಮೆ ಇದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಮಹಿಳೆ ಯರು, ಹಿರಿಯ ನಾಗರಿಕರು ಸೇರಿದಂತೆ ಅನೇಕ ಮಂದಿ ಶಾಲಾ- ಕಾಲೇಜು ಹಾಗೂ ಇತರೆ ಕೆಲಸ ಕಾರ್ಯಗಳಿಗಾಗಿ ಈ ಮಾರ್ಗ ದಲ್ಲಿ ಸಂಚರಿಸುವ ಬಸ್‌ಗಳನ್ನೇ ಹಿಡಿದುಕೊಂಡು ಎಚ್. ಡಿ. ಕೋಟೆ, ಹ್ಯಾಂಡ್ ಪೋಸ್ಟ್ ಹಾಗೂ ಮೈಸೂರಿಗೆ ಹೋಗಿಬರಬೇಕಿದೆ. ಆದರೆ ಬೆಳಗಿನ ವೇಳೆ ಈ ಮಾರ್ಗವಾಗಿ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆ ಇದ್ದು, ಒಂದೇ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತುಂಬಿಕೊಳ್ಳುತ್ತಿದ್ದಾರೆ.

ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಬಸ್‌ನಲ್ಲಿ ಸ್ಥಳಾವಕಾಶವಿಲ್ಲದೆ ಕೆಲ ವಿದ್ಯಾರ್ಥಿಗಳು ಬಾಗಿಲ ಬಳಿ ಜೋತು ಹಾಕಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲ ಬಾರಿಯಂತೂ ಸಣ್ಣ ಮಕ್ಕಳೂ ಬಾಗಿಲ ಬಳಿಯೇ ನಿಂತು ಪ್ರಯಾಣಿಸುತ್ತಿದ್ದಾರೆ. ಇದರಿಂದ ಅಪಾಯ ಉಂಟಾಗುವ ಆತಂಕ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಮಾರ್ಗವಾಗಿ ಬೆಳಗಿನ ಸಮಯದಲ್ಲಿ ಹೆಚ್ಚುವರಿಯಾಗಿ ಬಸ್‌ಗಳನ್ನು ಬಿಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.

-ರಾಜೇಶ್, ಅಂತರಸಂತೆ, ಎಚ್. ಡಿ. ಕೋಟೆ ತಾ.

Tags:
error: Content is protected !!