Mysore
25
haze

Social Media

ಶನಿವಾರ, 27 ಡಿಸೆಂಬರ್ 2025
Light
Dark

ಯಾವುದೇ ಕಾರಣಕ್ಕೂ ಬಡವರ ರೇಷನ್‌ ಕಾರ್ಡ್‌ ರದ್ದಾಗಲ್ಲ: ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟನೆ

ಬೆಂಗಳೂರು: ಬಡವರ ಬಳಿಯಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್‌ ಅವರು, ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ರೇಷನ್‌ ಕಾರ್ಡ್‌ಗಳಿವೆ. ಬೇರೆ ರಾಜ್ಯದಲ್ಲಿ 40% ಕಾರ್ಡ್‌ ಇದ್ದರೆ, ಇಲ್ಲಿ ಶೇಕಡಾ 80% ಬಿಪಿಎಲ್‌ ಕಾರ್ಡ್‌ಗಳಿವೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಯಾರು ತೆರಿಗೆ ಕಟ್ಟುತ್ತಾರೋ ಅಂತಹವರ ರೇಷನ್‌ ಕಾರ್ಡ್‌ ಕಟ್‌ ಆಗುತ್ತದೆ. ಉದಾಹರಣೆಗೆ ಸರ್ಕಾರಿ ನೌಕರರು ತೆರಿಗೆ ಕಟ್ಟುತ್ತಾರೆ. ಹಾಗಾಗಿ ಅವರ ರೇಷನ್‌ ಕಾರ್ಡ್‌ ರದ್ದು ಮಾಡಲಾಗುತ್ತದೆ. ಆದರೆ ಬಡವರ ರೇಷನ್‌ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

Tags:
error: Content is protected !!