Mysore
22
scattered clouds

Social Media

ಭಾನುವಾರ, 11 ಜನವರಿ 2026
Light
Dark

ನವೆಂಬರ್.‌25ರಿಂದ ಡಿಸೆಂಬರ್.‌20ರವರೆಗೆ ಸಂಸತ್‌ ಚಳಿಗಾಲದ ಅಧಿವೇಶನ

ನವದೆಹಲಿ: ನವೆಂಬರ್.‌25ರಿಂದ ಡಿಸೆಂಬರ್.‌20ರವರೆಗೆ ಸಂಸತ್‌ ಚಳಿಗಾಲದ ಅಧಿವೇಶನ ನಡೆಯಲಿದೆ.

ಇದರ ಅಂಗವಾಗಿ ನವೆಂಬರ್.‌24ರ ಭಾನುವಾರದಂದು ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಈ ಬಗ್ಗೆ ಸಚಿವ ಕಿರಣ್‌ ರಿಜಿಜು ಮಾಹಿತಿ ನೀಡಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿರುವ ಸಚಿವ ಕಿರಣ್‌ ರಿಜಿಜು ಅವರು, ಅಧಿವೇಶನಕ್ಕೂ ಮುನ್ನ ಸರ್ವಪಕ್ಷಗಳ ಸಭೆ ಕರೆಯಲಾಗುವುದು. ಸಭೆಯಲ್ಲಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಒಮ್ಮತ ಮೂಡಿಸಲಾಗುತ್ತದೆ. ಇದು ಆಗಿನಿಂದಲೂ ನಡೆದುಬಂದಿರುವ ವಾಡಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಭಾನುವಾರ ನಡೆಯಲಿರುವ ಸಭೆಯಲ್ಲಿ ಸರ್ಕಾರವು ತನ್ನ ಕಾರ್ಯಸೂಚಿಗಳನ್ನು ಮಂಡಿಸಲಿದ್ದು, ವಿವಿಧ ವಿಷಯಗಳ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.  ಅಧಿವೇಶನದಲ್ಲಿ ಮಣಿಪುರ ಹಿಂಸಾಚಾರ ಸೇರಿದಂತೆ ಹಲವು ಘಟನೆಗಳ ಬಗ್ಗೆ ವಿಪಕ್ಷಗಳು ಚರ್ಚೆ ನಡೆಸಲಿದ್ದು, ಆಡಳಿತ ಪಕ್ಷದ ವಿರುದ್ಧ ಮುಗಿಬೀಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

 

Tags:
error: Content is protected !!