Mysore
26
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಟೊಮೊಟೊ ಪೂರೈಕೆಯಲ್ಲಿ ತೀವ್ರ ಹೆಚ್ಚಳ: ದರದಲ್ಲಿ ಭಾರೀ ಇಳಿಕೆ

ನವದೆಹಲಿ: ಮಾರುಕಟ್ಟೆಗೆ ಟೊಮೊಟೊ ಪೂರೈಕೆಯಲ್ಲಿ ಹೆಚ್ಚಳವಾಗಿದ್ದು, ದರದಲ್ಲಿ ಭಾರೀ ಇಳಿಕೆಯಾಗಿದೆ.

ದೇಶದ ಪ್ರಮುಖ ಟೊಮೊಟೋ ಮಾರುಕಟ್ಟೆಗಳಾದ ಮಹಾರಾಷ್ಟ್ರದ ಪಿಂಪಲ್‌ಗಾವ್‌, ಆಂಧ್ರಪ್ರದೇಶದ ಮದನಪಲ್ಲಿ ಹಾಗೂ ಕರ್ನಾಟಕದ ಕೋಲಾರದಲ್ಲಿ ಟೊಮೊಟೋ ದರದಲ್ಲಿ ಭಾರೀ ಇಳಿಕೆಯಾಗಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ.

ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಟೊಟೊಟೊ ದರ ಇಳಿಕೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಅಕ್ಟೋಬರ್‌ನಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಇದರಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮೊಟೊ ಬೆಳೆಯು ಹಾನಿಗೀಡಾಗಿತ್ತು. ಇದರಿಂದ ಬೆಲೆಯೂ ಕೂಡ ಹೆಚ್ಚಳವಾಗಿತ್ತು.

ಈಗ ಎಲ್ಲಾ ಕಡೆ ರೈತರು ಟೊಮೊಟೊ ಬೆಳೆಯನ್ನು ಯತೇಚ್ಛವಾಗಿ ಬೆಳೆದಿದ್ದು, ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

Tags:
error: Content is protected !!