ಹೊಸದಿಲ್ಲಿ: ಪಾಕ್ ಆಕ್ರಮಿಸಿ ಪ್ರದೇಶವಾದ ಕಾಶ್ಮೀರವನ್ನು ಮರಳಿ ಪಡೆಯುವುದು ಬಿಜೆಪಿಯ ಬಯಕೆಯಾಗಿದೆ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬಳಿಕ ʻಬಟೇಂಗೆ ತೊ ಕಟೆಂಗೆʼ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯೋಗಿ ಅವರ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ಇದು ದೇಶದ ಒಗ್ಗಟ್ಟಿನ ಕರೆಯಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆಂಬುದನ್ನು ನಮಗೆ ಬಾಲ್ಯದಿಂದಲೂ ಕಲಿಸಲಾಗಿದೆ. ನಾವು ಒಗ್ಗಟ್ಟಾಗಿದ್ದರೆ ನಮ್ಮ ದೇಶ ಸುರಕ್ಷಿತವಾಗಿರಲಿದೆ ಎಂದಿದ್ದಾರೆ.
ದೇಶ ವಿಭಜನೆಯಾದರೆ ತುಂಡರಿಸಿ ಹೋಗುತ್ತದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನೂ ಮರಳಿ ಪಡೆಯಬೇಕೆಂದು ನಮ್ಮ ಸನಾತನ ಪಕ್ಷ ಬಯಸುತ್ತಿದೆ. ಹೀಗಾಗಿ ವಿಭಜನೆ ಮಾಡುವ ವಿರೋಧ ಪಕ್ಷಗಳ ಪಿತೂರಿಯು ವಿಫಲವಾಗಲಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಯೋಗಿ ಆದಿತ್ಯನಾಥ್ ಅವರು ದೇಶದ ಒಗ್ಗಟ್ಟಿಗೆ ಕರೆ ನೀಡಿದ್ದರು. ನಮ್ಮ ಒಡಕಿನಿಂದಲೇ ರಾಮಮಂದಿರ ಧ್ವಂಸಗೊಳಿಸಿದ್ದರು ಎಂದು ಪ್ರತಿಪಾದಿಸಿದ್ದರು.