Mysore
27
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಐಪಿಎಲ್‌ 2025: ಮೆಗಾ ಹರಾಜಿನಲ್ಲಿ ವಿದೇಶಿ ಆಟಗಾರನಾಗಿ ಭಾರತದ ಉನ್ಮುಕ್ತ್ ಚಾಂದ್‌ ಎಂಟ್ರಿ

ಜಗತ್ತಿನ ಶ್ರೀಮಂತ ಕೀಡೆಗಳಲ್ಲಿ ಕ್ರಿಕೆಟ್‌ ಕೂಡ ಒಂದಾಗಿದೆ. ಡೊಮೆಸ್ಟಿಕ್‌ ಮಾದರಿಯ ಕ್ರಿಕೆಟ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದು, ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೀಸನ್‌- 18ರ ಸಿದ್ದತೆಯು ಭರದಿಂದ ಸಾಗಿದೆ.

ಐಪಿಎಲ್‌-2025ರ ಮೆಗಾ ಹರಾಜು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದ್ದು, ಈ ಹರಾಜು ಹಲವು ವಿಶೇಷತೆಗಳಿಂದ ಕೂಡಿದೆ. ಭಾರತೀಯ ಆಟಗಾರ ಉನ್ಮುಕ್ತ್‌ ಚಾಂದ್‌ ವಿದೇಶಿ ಆಟಗಾರನಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅತ್ಯಂತ ವಿಶೇಷವಾಗಿದೆ.

ಐಪಿಎಲ್‌ ಹರಾಜಿನಲ್ಲಿ ಒಟ್ಟು 574 ಆಟಗಾರರ ಹೆಸರಿದ್ದು, ವಿದೇಶಿ ಆಟಗಾರರ ಪಟ್ಟಿಯಲ್ಲಿ ಬ್ಯಾಟರ್‌ ಉನ್ಮುಕ್ತ್‌ ಚಾಂದ್‌ ಅವರ ಹೆಸರಿದೆ.

2012ರಲ್ಲಿ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕರಾಗಿದ್ದ ಉನ್ಮುಕ್ತ್‌ ಚಾಂದ್‌ 2020ರವರೆಗೆ ಭಾರತದ ಆಟಗಾರರಾಗಿದ್ದರು. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ಶುರುವಾದ ಕಾರಣ 2021ರಲ್ಲಿ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಯುಎಸ್‌ಎ ಕ್ರಿಕೆಟ್‌ ಟೀಮ್‌ನಲ್ಲಿ ಸೇರ್ಪಡೆಗೊಂಡರು.

ಇದಕ್ಕೂ ಮುನ್ನ ಐಪಿಎಲ್‌ನಲ್ಲಿ (2011, 2012 ಮತ್ತು 2013) ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಮೂರು ವರ್ಷಗಳ ಕಾಲ ಆಡಿದ್ದರು. ನಂತರ ರಾಜಸ್ಥಾನ ರಾಯಲ್ಸ್‌, ಅಲ್ಲದೇ 2015ರಲ್ಲಿ ಚಾಂಪಿಯನ್‌ ಆದ ಮುಂಬೈ ತಂಡದ ಭಾಗವಾಗಿದ್ದರು.

 

Tags:
error: Content is protected !!