Mysore
30
few clouds

Social Media

ಗುರುವಾರ, 15 ಜನವರಿ 2026
Light
Dark

ಓದುಗರ ಪತ್ರ: ‘ಕಗ್ಗದ ದೀವಟಿಕೆ’ ಸ್ಪೂರ್ತಿಯಾಯಿತು

ಕಳೆದ ಕೆಲ ತಿಂಗಳುಗಳಿಂದ ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ‘ಕಗ್ಗದ ದೀವಟಿಕೆ ಅಂಕಣವು ಡಿ.ವಿ.ಗುಂಡಪ್ಪನವರ ಕಗ್ಗಗಳನ್ನು ವಿವರಣೆ ಸಹಿತ ತಿಳಿಸಿಕೊಡುತ್ತಿದೆ.

ವಿದ್ವಾನ್ ಕೃ.ಪಾ.ಮಂಜುನಾಥ್‌ರವರು ತಮ್ಮ ಬರಹದಲ್ಲಿ ಅಚ್ಚುಕಟ್ಟಾಗಿ ವಿವರಣೆ ನೀಡುತ್ತಿದ್ದು, ಇದನ್ನೇ ಸ್ಫೂರ್ತಿಯಾಗಿಸಿಕೊಂಡು ನಮ್ಮ ಸ್ನೇಹಿತರೆಲ್ಲ ಸೇರಿ ಒಂದು ತಂಡವನ್ನು ಕಟ್ಟಿಕೊಂಡು ವಾರಕ್ಕೊಮ್ಮೆ ಒಂದೆಡೆ ಸೇರಿ ‘ಮಂಕು ತಿಮ್ಮನ ತರಗತಿ’ಯನ್ನು ನಡೆಸುತ್ತಿದ್ದೇವೆ. ಈ ತಂಡದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಎಲ್‌ಐಸಿ ಅಧಿಕಾರಿಗಳು, ಲೇಖಕರು ಹಾಗೂ ಗೃಹಿಣಿಯರು ಸೇರಿದಂತೆ ಒಟ್ಟು ಹದಿನೈದು ಮಂದಿ ಇದ್ದು, ಕಳೆದ 6 ತಿಂಗಳುಗಳಿಂದ ಮಂಕುತಿಮ್ಮನ ಪದ್ಯವನ್ನು ಓದಿ ಭಾವಾರ್ಥವನ್ನು ತಿಳಿದುಕೊಳ್ಳುತ್ತಿದ್ದೇವೆ. ಇವು ನಮಗೆ ಜೀವನದ ಮೌಲ್ಯವನ್ನು ಬೋಧಿಸುತ್ತಿವೆ. ಇದರೊಟ್ಟಿಗೆ ನಿವೃತ್ತ ಪ್ರಾಂಶುಪಾಲ ವಂಕಟೇಶ ಮೂರ್ತಿಯವರು ಮಂಕುತಿಮ್ಮನ ಕಗ್ಗಗಳ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದು, ಅವರಿಂದಲೂ ಅನೇಕ ವಿಚಾರಗಳು ತಿಳಿಯುತ್ತಿವೆ.
-ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು,

Tags:
error: Content is protected !!